ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 13 JUNE 2023
TUMARI : ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಮತ್ತಷ್ಟು ಇಳಿಕೆಯಾಗಿದೆ. ಮುಂಜಾಗ್ರತ ಕ್ರಮವಾಗಿ ಸಿಗಂದೂರು ಲಾಂಚ್ನಲ್ಲಿ (Sigandur Launch) ವಾಹನ ಸಾಗಣೆ ನಿರ್ಬಂಧಿಸಲಾಗಿದೆ. ಜೂ.14ರಿಂದ ಲಾಂಚ್ನಲ್ಲಿ ಬಸ್, ಕಾರು ಸೇರಿದಂತೆ ವಾಹನ ಸಾಗಣೆ ನಿಲ್ಲಿಸಲಾಗುತ್ತಿದೆ.
ಅಂಬರಗೋಡ್ಲು – ಕಳಸವಳ್ಳಿಯ ಎರಡು ಬದಿಯಲ್ಲಿ ಪ್ಲಾಟ್ ಫಾರಂ ಮುಗಿದಿದೆ. ವಾಹನಗಳನ್ನು ಹತ್ತಿಸಿದರೆ ದಡದ ಕೆಸರಿನಲ್ಲಿ ಲಾಂಚ್ ಸಿಕ್ಕಿ ಬೀಳಲಿದೆ. ಆದ್ದರಿಂದ ಜನರನ್ನು ಮಾತ್ರ ಲಾಂಚ್ಗೆ ಹತ್ತಿಸಲು ನಿರ್ಧರಿಸಲಾಗಿದೆ ಎಂದು ಕಡವು ಅಧಿಕಾರಿಗಳು ತಿಳಿಸಿದ್ದಾರೆ.
ಜೂ.14ರಿಂದ ಸ್ಥಳೀಯರು ಮತ್ತು ಪ್ರವಾಸಿಗರನ್ನು ಮಾತ್ರ ಲಾಂಚ್ನಲ್ಲಿ ಕರೆದೊಯ್ಯಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ – ಸಿಗಂದೂರು ಲಾಂಚ್, ಇನ್ನೊಂದು ವಾರದಲ್ಲಿ ಸ್ಥಗಿತ ಸಾಧ್ಯತೆ, ಕಾರಣವೇನು?
ಶರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಂಗಾರು ಆರಂಭವಾಗಿ, ಚುರುಕುಗೊಳ್ಳದೆ ಇದ್ದರೆ ಲಾಂಚ್ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮುಂದೆ ಸ್ಥಳೀಯರ ಸಂಚಾರಕ್ಕೆ ಅನುಕೂಲವಾಗಲಿ ಎಂದು ಸಣ್ಣ ಲಾಂಚ್ ಮತ್ತು ಬೋಟ್ ಬಳಸಲು ಯೋಜಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422