ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶನ, ಜನರಲ್ಲಿ ಆತಂಕ, ಪೊಲೀಸರ ಮುಂದೆ ಪಿಸ್ತೂಲ್‌ನ ಅಸಲಿ ಕಥೆ ಬಹಿರಂಗ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 FEBRUARY 2024

SAGARA : ಜಗಳದ ವೇಳೆ ಆಟಿಕೆ ಪಿಸ್ತೂಲು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಆಂತಕ ಮೂಡಿಸಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದರು. ಸಾಗರದ ಜೆ.ಪಿ.ನಗರದಲ್ಲಿ ಕಳೆದ ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶಿಸಲಾಗಿತ್ತು.

ಆಯನೂರಿನ ದರ್ಶನ್‌ (19) ಮತ್ತು ಸಾಗರದ ನವೀನ್‌ (25) ಎಂಬಾತನ ವಿಚಾರಣೆ ನಡೆಸಲಾಯಿತು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಫೆ.11ರ ರಾತ್ರಿ ಯುವಕರ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ದರ್ಶನ್‌, ಪಿಸ್ತೂಲು ತೋರಿಸಿದ್ದ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದರು. ಕೆಲವರು ಗಲಾಟೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು.

ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಾಗರ ಠಾಣೆ ಇನ್ಸ್‌ಪೆಕ್ಟರ್‌ ಸೀತಾರಾಂ, ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಆಟಿಕೆ ಪಿಸ್ತೂಲು ಪ್ರದರ್ಶಿಸಿರುವುದಾಗಿ ಯುವಕರು ಹೇಳಿದ್ದಾರೆ. ಘಟನೆ ಕುರಿತು ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಮರಳಿದಾಗ ಮನೆ ಬಾಗಿಲು ತೆಗೆದಿತ್ತು, ಕೊಠಡಿಯಲ್ಲಿ ಲೈಟ್‌ ಉರಿಯುತ್ತಿತ್ತು, ಕೇಸ್‌ ದಾಖಲು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment