ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿಕಾರಿಪುರ: ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ರೈತರೊಬ್ಬರು ಮನೆ ಮುಂದೆ ಒಣಗಿಸಲು ಹಾಕಿದ್ದ ಸುಮಾರು ₹2,88,000 ಮೌಲ್ಯದ ಅಡಿಕೆಯನ್ನು (arecanut) ಕಳ್ಳರು ದೋಚಿದ್ದಾರೆ. ಗ್ರಾಮದ ನಿವಾಸಿ ಭುವನೇಶ್ವರ್ ಎಂಬುವವರು ತಮ್ಮ ಮನೆ ಎದುರಿನ ಖಾಲಿ ಜಾಗದಲ್ಲಿ ಒಣಗಲು ಹಾಕಿದ್ದ ಅಡಿಕೆಯಲ್ಲಿ ಈ ಕಳ್ಳತನ ನಡೆದಿದೆ.
ಮಾರ್ಚ್ 26ರ ರಾತ್ರಿ ಭುವನೇಶ್ವರ್ ಅವರು ಅಡಿಕೆಗೆ ಟಾರ್ಪಲ್ ಮುಚ್ಚಿ ಮನೆಗೆ ಹೋಗಿ ಮಲಗಿದ್ದರು. ಮರುದಿನ ಬೆಳಗ್ಗೆ ಎದ್ದು ನೋಡಿದಾಗ, ಸುಮಾರು 12 ಕ್ವಿಂಟಾಲ್‌ನಷ್ಟು ಒಣಗಿದ ಸಿಪ್ಪೆಗೋಟು ಅಡಿಕೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಅಡಿಕೆಯ ಒಟ್ಟು ಮೌಲ್ಯ ₹2,88,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್ ಶಾಕ್, ಆಗಿದ್ದೇನು?

LATEST NEWS
- ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

- ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಸಂಘದ ಸಾಲದ ಹೆಸರಲ್ಲಿ ನಡೆಯಿತು ಮಹಾ ವಂಚನೆ, ಆಗಿದ್ದೇನು?

- ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್ ಶಾಕ್, ಆಗಿದ್ದೇನು?

- ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

- ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು














