ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಶಿಕಾರಿಪುರ: ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ರೈತರೊಬ್ಬರು ಮನೆ ಮುಂದೆ ಒಣಗಿಸಲು ಹಾಕಿದ್ದ ಸುಮಾರು ₹2,88,000 ಮೌಲ್ಯದ ಅಡಿಕೆಯನ್ನು (arecanut) ಕಳ್ಳರು ದೋಚಿದ್ದಾರೆ. ಗ್ರಾಮದ ನಿವಾಸಿ ಭುವನೇಶ್ವರ್ ಎಂಬುವವರು ತಮ್ಮ ಮನೆ ಎದುರಿನ ಖಾಲಿ ಜಾಗದಲ್ಲಿ ಒಣಗಲು ಹಾಕಿದ್ದ ಅಡಿಕೆಯಲ್ಲಿ ಈ ಕಳ್ಳತನ ನಡೆದಿದೆ.

ಮಾರ್ಚ್‌ 26ರ ರಾತ್ರಿ ಭುವನೇಶ್ವರ್ ಅವರು ಅಡಿಕೆಗೆ ಟಾರ್ಪಲ್ ಮುಚ್ಚಿ ಮನೆಗೆ ಹೋಗಿ ಮಲಗಿದ್ದರು. ಮರುದಿನ ಬೆಳಗ್ಗೆ ಎದ್ದು ನೋಡಿದಾಗ, ಸುಮಾರು 12 ಕ್ವಿಂಟಾಲ್‌ನಷ್ಟು ಒಣಗಿದ ಸಿಪ್ಪೆಗೋಟು ಅಡಿಕೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಅಡಿಕೆಯ ಒಟ್ಟು ಮೌಲ್ಯ ₹2,88,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Shiralakoppa-Police-Station

Shiralakoppa-Police-Station

ಇದನ್ನೂ ಓದಿ – ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

Sunrise Facility Services, Sri sai Trust Shimoga
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment