ಶಿಕಾರಿಪುರ ರಸ್ತೆಯಲ್ಲಿ ಮಹಿಳೆಗೆ ಬೊಲೇರೋ ಡಿಕ್ಕಿ, ಸಾವು | ರಿಪ್ಪನ್‌ಪೇಟೆ ಸಮೀಪ ಬೈಕ್‌ಗಳು ಮುಖಾಮುಖಿ ಡಿಕ್ಕಿ

SHIVAMOGGA LIVE NEWS | 29 APRIL 2024

ಬೈಕ್‌ಗಳು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಾಯ

RIPPONPETE : ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿ ತಂದೆ, ಮಗ ಗಾಯಗೊಂಡಿದ್ದಾರೆ. ರಿಪ್ಪನ್‌ಪೇಟೆ ಸಮೀಪದ ಹಾರೋಹಿತ್ತಲು ಗ್ರಾಮದ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಶಿವಪ್ಪ ಮತ್ತು ಅವರ ಮಗ ಅಭಿಷೇಕ್‌ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಶಿವಪ್ಪ ಮತ್ತು ಅಭಿಷೇಕ್‌ ಗಾಯಗೊಂಡಿದ್ದು, ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಯಿತು. ಘಟನೆ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಲೇರೋ ಡಿಕ್ಕಿಯಾಗಿ ಮಹಿಳೆ ಸಾವು

SHIKARIPURA : ಬೊಲೇರೊ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ತರಲಘಟ್ಟ ನಿವಾಸಿ ಮುತ್ತಮ್ಮ (60) ಮೃತರು. ಮುನೆ ಮುಂಭಾಗ ರಸ್ತೆ ದಾಟುತ್ತಿದ್ದ ಮುತ್ತಮ್ಮಗೆ ಶಿವಮೊಗ್ಗ ಕಡೆಯಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಬೊಲೇರೊ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿ ವೈದ್ಯರು ಮುತ್ತಮ್ಮ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಇನ್ನು ಐದು ದಿನ ಆರೆಂಜ್‌ ಅಲರ್ಟ್‌, ಹಲವು ಜಿಲ್ಲೆಗಳಿಗು ವಾರ್ನಿಂಗ್‌, ಏನಿದು ಎಚ್ಚರಿಕೆ?

ACCIDENT-NEWS-GENERAL-IMAGE.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment