ಶಿಕಾರಿಪುರ : ಕ್ಷೇತ್ರ ದೇವತೆ ಹುಚ್ಚುರಾಯಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ದವನದ ಹುಣ್ಣಿಮೆಯಂದು ಸಾವಿರಾರು ಭಕ್ತರ ಜಯಘೋಷದೊಂದಿಗೆ ರಥೋತ್ಸವ (Ratotsava) ನೆರವೇರಿತು.
ಶನಿವಾರ ಬೆಳಗ್ಗೆ 8.30ರ ವೃಷಭ ಲಗ್ನದಲ್ಲಿ ಶ್ರೀ ಹುಚ್ಚರಾಯಸ್ವಾಮಿಯ ರಥಾರೋಹಣ, ಫಲ ಸಮರ್ಪಣೆ, ಮಹಾಮಂಗಳಾರತಿ ನಂತರ ವಾದ್ಯಗೋಷ್ಠಿಗಳ ನಡುವೆ ರಥಬೀದಿಯಲ್ಲಿ ತೇರು (Ratotsava) ಸಂಚರಿಸಿತು. ಭಕ್ತರು ಬಾಳೆಹಣ್ಣು, ದವನದ ಸೊಪ್ಪನ್ನು ತೇರಿಗೆ ಎಸೆದರು. ಮಾರಿಕಾಂಬ ಗದ್ದುಗೆವರೆಗೆ ರಥವನ್ನು ಎಳೆಯಲಾಯಿತು. ನಂತರ ಭಕ್ತರಿಗೆ ಹಣ್ಣು ಕಾಯಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಯಿತು.
ಗರುಡ ದರ್ಶನದಿಂದ ಹರ್ಷೋದ್ಗೋರ
ತೇರು ಎಳೆಯುವ ಮುನ್ನ ಆಗಸದಲ್ಲಿ ಗರುಡ ಆಗಮಿಸಿ ದೇವಸ್ಥಾನದ ಮೇಲೆ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಪ್ರತೀತಿ ಇದೆ. ಈ ವರ್ಷವೂ ಗರುಡ ಪ್ರದಕ್ಷಿಣೆ ಹಾಕಿದ ಸಂದರ್ಭ ಭಕ್ತರು ಹರ್ಷೋದ್ಗಾರ ಮೊಳಗಿಸಿದರು.
ಸಾವಿರ ಸಾವಿರ ಭಕ್ತರು ಭಾಗಿ
ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾಗರ, ಸೊರಬ, ಆನವಟ್ಟಿ, ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆಯ ಸಾವಿರಾರು ಭಕ್ತರಿಗೆ ಶ್ರೀ ಹುಚ್ಚರಾಯಸ್ವಾಮಿ ಮನೆದೇವರಾಗಿದ್ದು, ಎಲ್ಲರೂ ಆಗಮಿಸಿದ್ದರು. ಶಂಖ, ಜಾಗಟೆ, ಗೋಪಾಲಭವಸಿ ಇಟ್ಟು, ಸಿಹಿ ಅಡುಗೆ ನೈವೇದ್ಯ ಇರಿಸಿ ದಾಸಯ್ಯನ ಕರೆಯಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.
ಭಕ್ತರಿಗೆ ಪ್ರಸಾದ ವಿತರಣೆ
ಪುರಸಭೆ ವತಿಯಿಂದ ತರಳಬಾಳು ಸಮುದಾಯ ಭವನದಲ್ಲಿ ಶುಕ್ರವಾರ ರಾತ್ರಿ, ಶನಿವಾರ ಬೆಳಿಗ್ಗೆ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ದೇವಸ್ಥಾನ ಪಕ್ಕದ ಭ್ರಾಂತೇಶ ಸಮುದಾಯ ಭವನದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಮಜ್ಜಿಗೆ, ಪಾನಕ ವಿತರಿಸಿ ಭಕ್ತಿ ಸಮರ್ಪಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪುರಸಭೆ ಅಧ್ಯಕ್ಷೆ ಸುನಂದ, ಪ್ರಮುಖರಾದ ನಾಗರಾಜಗೌಡ, ಗೋಣಿ ಮಾಲತೇಶ್, ತಹಶೀಲ್ದಾರ್ ಮಲ್ಲೇಶಪ್ಪ ಪೂಜಾರ್ ಕುಟುಂಬ ಸಹಿತ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ » ಅಂಗಡಿಗಳಿಗೆ ನುಗ್ಗಿದ ನೀರು, ವಾಹನಗಳು ಜಲಾವೃತ, ಕಾರಗಳ ಮೇಲೆ ಬಿದ್ದ ರೆಂಬೆ, ಮಳೆಯಿಂದ ಏನೆಲ್ಲ ಹಾನಿಯಾಗಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200