ಶಿವಮೊಗ್ಗದ ವ್ಯಕ್ತಿಯ ವಾಟ್ಸಪ್‌ಗೆ ಬಂತು ಟ್ರಾಫಿಕ್‌ ಚಲನ್‌, ಕ್ಲಿಕ್‌ ಮಾಡಿದ ನಂತರ ಕಾದಿತ್ತು ಶಾಕ್‌, ಆಗಿದ್ದೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ : ನಿವೃತ್ತ ಉದ್ಯೋಗಿಯೊಬ್ಬರ ಮೊಬೈಲ್‌ನ ವಾಟ್ಸಪ್‌ಗೆ ಟ್ರಾಫಿಕ್‌ ಚಲನ್‌ ಎಂದು ಎ.ಪಿ.ಕೆ ಫೈಲ್‌ (APK File) ಕಳುಹಿಸಿ ಮೂರು ಬ್ಯಾಂಕ್‌ ಖಾತೆಗಳಿಂದ 7.42 ಲಕ್ಷ ರೂ. ಲಪಟಾಯಿಸಿದ್ದಾರೆ. ಈ ಕುರಿತು ನಿವೃತ್ತ ಉದ್ಯೋಗಿಯು ಶಿವಮೊಗ್ಗ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಏ.2ರಂದು ನಿವೃತ್ತ ಉದ್ಯೋಗಿಯ ವಾಟ್ಸಪ್‌ಗೆ ಟ್ರಾಪಿಕ್‌ ಚಲನ್‌ 1000 ಎಂದು ಪಿಡಿಎಫ್‌ ಫೈಲ್‌ ಮಾದರಿಯಲ್ಲಿರುವ ಎ.ಪಿ.ಕೆ ಫೈಲ್‌ (APK File)  ಬಂದಿತ್ತು. ಇದನ್ನು ಕ್ಲಿಕ್‌ ಮಾಡಿದಾಗ ಕರ್ನಾಟಕ ಸರ್ಕಾರದ ಚಿಹ್ನೆ ಇತ್ತು. ಏ.8ರಂದು ನಿವೃತ್ತ ಉದ್ಯೋಗಿಯ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತನೊಬ್ಬ ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗಿದೆ ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಿವೃತ್ತ ಉದ್ಯೋಗಿಯು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಎಸ್‌.ಬಿ.ಐ ಬ್ಯಾಂಕ್‌ನ ಒಂದು ಖಾತೆಯಿಂದ 7 ಬಾರಿ ಹಣ ಕಡಿತವಾಗಿತ್ತು. ಎಸ್‌.ಬಿ.ಐ ಬ್ಯಾಂಕ್‌ನ ಮತ್ತೊಂದು ಖಾತೆಯಿಂದ 9 ಬಾರಿ ಹಣ ಕಡಿತವಾಗಿತ್ತು. ಕರ್ಣಾಟಕ ಬ್ಯಾಂಕ್‌ನ ಖಾತೆಯಿಂದ ಒಟ್ಟು 6 ಬಾರಿ ಹಣ ಕಡಿತವಾಗಿತ್ತು. ಮೂರು ಬ್ಯಾಂಕ್‌ ಖಾತೆಗಳಿಂದ ಒಟ್ಟು 7.42 ಲಕ್ಷ ರೂ. ಹಣ ಕಡಿತವಾಗಿರುವುದು ಗೊತ್ತಾಗಿತ್ತು. ಕೂಡಲೆ 1930 ಹೆಲ್ಪ್‌ಲೈನ್‌ ನಂಬರ್‌ಗೆ ಕರೆ ಮಾಡಿದ ನಿವೃತ್ತ ಉದ್ಯೋಗಿ, ಬಳಿಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

ಎ.ಪಿ.ಕೆ ಫೈಲ್‌ ಬಗ್ಗೆ ಇರಲಿ ಜಾಗೃತಿ

ವಾಟ್ಸಪ್‌ಗೆ ಎ.ಪಿ.ಕೆ ಫೈಲ್‌ಗಳನ್ನು ಕಳುಹಿಸಿ, ಅದರ ಮೂಲಕ ನಿಮ್ಮ ಮೊಬೈಲ್‌ನ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿಕೊಂಡು ಹಣ ವರ್ಗಾಯಿಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆ ಅಪರಿಚಿತ ಲಿಂಕುಗಳು, ಎ.ಪಿ.ಕೆ ಫೈಲುಗಳನ್ನು ಬಂದಾಗ ಎಚ್ಚರಿಕೆಯಿಂದ ಇರಬೇಕು. ಅಂತಹ ಫೈಲ್‌ಗಳನ್ನು ಓಪನ್‌ ಮಾಡದೆ ಇರುವುದು ಸೂಕ್ತ.

Nirantara-Ladies-PG-Shimoga.

ಇದನ್ನೂ ಓದಿ » ಅಂಗಡಿಗಳಿಗೆ ನುಗ್ಗಿದ ನೀರು, ವಾಹನಗಳು ಜಲಾವೃತ, ಕಾರಗಳ ಮೇಲೆ ಬಿದ್ದ ರೆಂಬೆ, ಮಳೆಯಿಂದ ಏನೆಲ್ಲ ಹಾನಿಯಾಗಿದೆ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment