ಶಿಕಾರಿಪುರ: ಕೋವಿಡ್ ನಂತರ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನಾರಂಭಗೊಂಡಿದೆ. ಇದರಿಂದ ಶಿಕಾರಿಪುರ ತಾಲ್ಲೂಕಿನ ಐದು ಗ್ರಾಮಗಳಿಗೆ ಅನುಕೂಲವಾಗಿದ್ದು, ಗ್ರಾಮಸ್ಥರು ಸಂಭ್ರಮಿಸಿದರು.
ಹಿರೇಕೊರಲಹಳ್ಳಿ, ಅಂಜನಾಪುರ, ತರಲಘಟ್ಟ, ದೊಡ್ಡಜೋಗಿಹಳ್ಳಿ ಹಾಗೂ ಕೊಪ್ಪದಕರೆ ಗ್ರಾಮಗಳಿಗೆ ಬಸ್ ಸಂಪರ್ಕ ಪುನಾರಂಭವಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಚಾರದ ಸಮಸ್ಯೆ ನೀಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಿಕಾರಿಪುರ ಮುಖ್ಯರಸ್ತೆಯಿಂದ ದೂರವಿರುವ ಈ ಗ್ರಾಮಗಳ ಜನರು ಹಾಗೂ ವಿದ್ಯಾರ್ಥಿಗಳು ಮುಖ್ಯರಸ್ತೆಗೆ ಬರಲು ಮೈಲುಗಟ್ಟಲೆ ನಡೆದುಕೊಂಡು ಹೋಗಬೇಕಿತ್ತು. ಈಗ ಬಸ್ ಸಂಚಾರ ಆರಂಭವಾಗಿರುವುದರಿಂದ ಸಾರ್ವಜನಿಕರಿಗೆ ಸಂಭ್ರಮಿಸಿದರು.

ಬೆಳಿಗ್ಗೆ 8 ಗಂಟೆಗೆ ಶಿಕಾರಿಪುರ ಬಸ್ ನಿಲ್ದಾಣದಿಂದ ಹೊರಡುವ ಬಸ್ಸು, ತರಲಘಟ್ಟ, ದೊಡ್ಡಜೋಗಿಹಳ್ಳಿ, ಕೊಪ್ಪದಕರೆ, ಅಂಜನಾಪುರ ಹಾಗೂ ಹಿರೇಕೊರಲಹಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಸಂಜೆ 4.30 ಕ್ಕೆ ಇದೇ ಮಾರ್ಗವಾಗಿ ವಾಪಸ್ ತೆರಳಲಿದೆ ಎಂದು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಾದ ಡಿ.ಎನ್. ಅಂಬಿಕಾ ಉಪಸ್ಥಿತರಿದ್ದರು.