ಶಿವಮೊಗ್ಗ ಲೈವ್.ಕಾಂ | 21 ಮಾರ್ಚ್ 2019
ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಚಿಹ್ನೆ ಅಡಿ ಲೋಕಸಭೆ ಚುನಾವಣೆ ಎದುರಿಸಬೇಕು ಅಂತಾ, ಒತ್ತಾಯ ಶುರುವಾಗಿದೆ. ಶಿಕಾರಿಪುರದಲ್ಲಿ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿದೆ.
ಶಿಕಾರಿಪುರ ತಾಲೂಕಿನಲ್ಲಿ ಜೆಡಿಎಸ್’ಗಿಂತಲೂ ಕಾಂಗ್ರೆಸ್ ಪಕ್ಷದ ಹೆಚ್ಚು ಸಂಘಟಿತವಾಗಿದೆ. ಗ್ರಾಮೀಣ ಭಾಗದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಸಂಘಟನೆಯಿದೆ. ಹಾಗಾಗಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷದ ಚಿಹ್ನೆ ಅಡಿ ಸ್ಪರ್ಧಿಸಿದರೆ, ಹೆಚ್ಚು ಮತ ಪಡೆಯಬಹುದು ಅಂತಾ ಯುವ ಕಾಂಗ್ರೆಸ್’ನ ಕೆಲ ಕಾರ್ಯಕರ್ತರು ಒತ್ತಾಯಿಸಿದರು.
ಮಧು ಬಂಗಾರಪ್ಪ ಏನಂದರು?
ಕೆಲ ಯುವ ಕಾಂಗ್ರೆಸ್ ಕಾರ್ಯಕರ್ತರ ಮನವಿಗೆ ಉತ್ತರ ನೀಡಿದ ಮಧು ಬಂಗಾರಪ್ಪ, ರಾಷ್ಟ್ರಮಟ್ಟದಲ್ಲಿ ಸೀಟು ಹಂಚಿಕೆಯಾಗಿದೆ. ಚಿಹ್ನೆ ವಿಚಾರದಲ್ಲಿ ಗೊಂದಲ ಬೇಡ. ಈಗ ಜೆಡಿಎಸ್ ಪಕ್ಷ ಹೊರತುಪಡಿಸಿ, ಬೇರೆ ಚಿಹ್ನೆ ಅಡಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಪ್ರಮುಖರಾದ ಗೋಣಿ ಮಾಲ್ತೇಶ್, ಶಾಂತವೀರಪ್ಪಗೌಡ, ಶ್ರೀಕಾಂತ್, ನಗರದ ಮಹಾದೇವಪ್ಪ, ಅನಿತಾ ಉಮೇಶ್, ನರಸಿಂಗ ನಾಯ್ಕ್, ಮದೋಜಿರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]