ಶಿವಮೊಗ್ಗ ಲೈವ್.ಕಾಂ | 10 ಮೇ 2019
ನನಗೆ ಶಿಕಾರಿಪುರ ಮತ್ತು ಸೊರಬ ಎರಡು ಕಣ್ಣುಗಳಿದ್ದಂತೆ. ಶಿಕಾರಿಪುರದಿಂದಲೇ ನನ್ನ ಗೆಲುವಿನ ಶಿಕಾರಿ ಆರಂಭವಾಗಿದೆ. ಹಾಗಾಗಿಯೇ ಫಲಿತಾಂಶಕ್ಕೂ ಮೊದಲೇ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಶಿಕಾರಿಪುರದ ಗುರುಭವನದಲ್ಲಿ ಜೆಡಿಎಸ್, ಕಾಂಗ್ರೆಸ್ ಆಯೋಜಿಸಿದ್ದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಸುಳ್ಳು ಹೇಳುವವರು ಸೋಲುತ್ತಾರೆ. ಸತ್ಯ ಗೆಲ್ಲುತ್ತದೆ. ಇವರ ಸರ್ವಾಧಿಕಾರಿ ಧೋರಣೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಅವೆಲ್ಲ ನನಗೆ ಮತಗಳಾಗಿವೆ ಬಂದಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾವು ಬಿಜೆಪಿಯವರಂತೆ ಈಡಿಗ, ಲಿಂಗಾಯತ, ಅಲ್ಪಸಂಖ್ಯಾತ, ಹಿಂದುಳಿದವರು ಎಂದು ಲೆಕ್ಕ ಹಾಕಲಿಲ್ಲ. ಎಲ್ಲರೂ ಒಂದೇ ಎಂಬುದು ನಮ್ಮ ನಂಬಿಕೆ. ಹಾಗಾಗಿ ಎಲ್ಲರೂ ನಮ್ಮನ್ನು ಬೆಂಬಲಿಸಿದ್ದಾರೆ. ಶಿಕಾರಿಪುರದ ಕಾರ್ಯಕರ್ತರು, ಜನಪ್ರತಿನಿಧಿಗಳ ದಬ್ಬಾಳಿಕೆಯಿಂದ ನೊಂದಿದ್ದಾರೆ. ಮೇ 23ಕ್ಕೆ ಇವರ ದಬ್ಬಾಳಿಕೆ ಕೊನೆಯಾಗಲಿದೆ ಎಂದರು.
ಪ್ರಮುಖರಾದ ಗೋಣಿ ಮಾಲತೇಶ್, ಹೆಚ್.ಟಿ.ಬಳಿಗಾರ್, ನಗರದ ಮಹದೇವಪ್ಪ, ಶಾಂತ ವೀರಪ್ಪಗೌಡ, ಬಿಳಕಿ ನಾಗರಾಜಗೌಡ, ಹುಲ್ಮಾರ್ ಮಹೇಶ್, ಜೆ.ಫಕೀರಪ್ಪ, ನರಸಿಂಗನಾಯ್ಕ, ಉಳ್ಳಿ ದರ್ಶನ್, ಎನ್.ಅರುಣ್, ಸುರೇಶ್, ಫಯಾಜ್, ಉಮೇಶ್ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com

LATEST NEWS
- ಬೈಕ್ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

- ತಾಳಗುಪ್ಪ ಇಂಟರ್ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್, ಆಗಿದ್ದೇನು?

- ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

- ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

- ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್ ಇರಲ್ಲ

About The Editor
ನಿತಿನ್ ಆರ್.ಕೈದೊಟ್ಲು










