ಶಿಕಾರಿಪುರಕ್ಕೆ ಇವತ್ತು ಮೀನುಗಾರಿಕೆ ಸಚಿವರ ಭೇಟಿ, ಎಲ್ಲೆಲ್ಲಿ ತೆರಳಲಿದ್ದಾರೆ?

ಶಿವಮೊಗ್ಗ: ಭಾರತ್‌ ಜೋಡೋ 2.0 ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್‌.ಬಸವಂತಪ್ಪ ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ. ಇಂದು ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗದಿಂದ ಸವಳಂಗ ರಸ್ತೆ ಮಾರ್ಗವಾಗಿ ಶಿಕಾರಿಪುರಕ್ಕೆ ತೆರಳಲಿದ್ದಾರೆ. ಅಲ್ಲಿ ಆಯೋಜಿಸಲಾಗಿರುವ ‘ಭಾರತ್ ಜೋಡೋ 2.0’ ಕಾರ್ಯಕ್ರಮದಲ್ಲಿ ಸಚಿವ ಬಸವಂತಪ್ಪ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಶಿಕಾರಿಪುರದಿಂದ ಹೊರಟು ದಾವಣಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.

SHIKARIPURA-NEWS-GRAPHICS-BY-SHIVAMOGGA-LIVE.