ಶಿಕಾರಿಪುರದಿಂದ ಹೊಸ ಕೆಎಸ್‌ಆರ್‌ಟಿಸಿ ಬಸ್ ಶುರು, ಸದ್ಯದಲ್ಲೇ ಡಿಪೋ ಆರಂಭ, ಗ್ರಾಮಗಳಿಗೂ ಬರುತ್ತೆ ಸರ್ಕಾರಿ ಬಸ್

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIKARIPURA | 8 ನವೆಂಬರ್ 2019

ಶಿಕಾರಿಪುರದಿಂದ ಶ್ರೀ ಕ್ಷೇತ್ರ ಕೊಟ್ಟೂರಿಗೆ ನೂತನ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಡಿಪೋ ಆದ ಬಳಿಕ ನಮಗೆ ಭಾರಿ ಅನುಕೂಲವಾಗಲಿದೆ.

ಗ್ರಾಮಾಂತರ ಭಾಗಗಳಿಗೆ ಇನ್ನೂ ಹೆಚ್ಚಿನ ಬಸ್ ಸೇವೆ ಅಗತ್ಯವಾಗಿದೆ. ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಶಿಕಾರಿಪುರದಿಂದ ವಾಣಿಜ್ಯ ನಗರಗಳಿಗೆ, ಮಹಾ ನಗರಗಳಿಗೆ, ರಾಜಧಾನಿಗೆ ಹಾಗೂ ಪ್ರಸಿದ್ದ ಕ್ಷೇತ್ರಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗುವುದು ಎಂದರು.

ತಾಲೂಕು ಅಭಿವೃದ್ಧಿಯಲ್ಲಿ ಶರವೇಗದಲ್ಲಿ ಸಾಗುತ್ತಿದೆ. ಎರಡು ಹೆದ್ದಾರಿಗಳು ತಾಲೂಕಿನಲ್ಲಿ ಹಾದು ಹೋಗಿವೆ. ಸದ್ಯದಲ್ಲಿಯೇ ಶಿವಮೊಗ್ಗದಿಂದ ರಾಣೆಬೆನ್ನೂರಿಗೆ ಶಿಕಾರಿಪುರ ಮಾರ್ಗವಾಗಿ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದರು. ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್.ಗುರುಮೂರ್ತಿ, ಚಾರಗಲ್ಲಿ ಪರಶುರಾಮ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿದ್ದರು.

ಹೊಸ ಬಸ್ ಟೈಮಿಂಗ್ಸ್ ಏನು?

ಬೆಳಗ್ಗೆ 6.45ಕ್ಕೆ ಶಿವಮೊಗ್ಗ ಬಿಟ್ಟು 7.45ಕ್ಕೆ ಶಿಕಾರಿಪುರ ತಲುಪಲಿದೆ. ಬಳಿಕ ಶಿಕಾರಿಪುರದಿಂದ ಮತ್ತೀಕೋಟೆ, ನಿಂಬೆಗೊಂದಿ, ಮಾಸೂರು, ರಟ್ಟಿಹಳ್ಳಿ, ರಾಣೆಬೆನ್ನೂರು, ಹರಿಹರ, ಹರಪನಹಳ್ಳಿ ಮಾರ್ಗವಾಗಿ ಕೊಟ್ಟೂರನ್ನು ಮಧ್ಯಾಹ್ನ 12ಕ್ಕೆ ತಲುಪಲಿದೆ. ಅಲ್ಲಿಂದ ವಾಪಸ್ 12.30ಕ್ಕೆ ಹೊರಟು ಅದೇ ಮಾರ್ಗದಲ್ಲಿ 4.30ಕ್ಕೆ ಶಿಕಾರಿಪುರ ತಲುಪಲಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment