‘ಗೀತಾ ಶಿವರಾಜ್‌ ಕುಮಾರ್‌ ಗೆಲ್ತಾರೆ’, ಟ್ರಾಕ್ಟರ್‌ ಪಣಕ್ಕಿಟ್ಟು ಶಿಕಾರಿಪುರದ ರೈತನ ಓಪನ್‌ ಚಾಲೆಂಜ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 MAY 2024

SHIMOGA : ಲೋಕಸಭೆ ಚುನಾವಣೆ ಮತದಾನ ಮುಗಿದಿದ್ದು ಸೋಲು, ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಈ ಮಧ್ಯೆ ಓಪನ್‌ ಚಾಲೆಂಜ್‌ಗಳು ಶುರುವಾಗಿವೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಗೆಲ್ಲಲಿದ್ದಾರೆ ಎಂದು ರೈತನೊಬ್ಬ ಸವಾಲು ಹಾಕಿದ್ದಾನೆ. ತನ್ನ ಟ್ರಾಕ್ಟರ್‌ ಅನ್ನು ಪಣಕ್ಕಿಟ್ಟಿದ್ದಾನೆ. ಇದರ ವಿಡಿಯೋ ಈಗ ವೈರಲ್‌ ಆಗಿದೆ.

ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರವೀಂದ್ರ ಎಂಬುವವರು ತಮ್ಮ ಟ್ರಾಕ್ಟರ್‌ ಪಣಕ್ಕಿಟ್ಟು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾರೆ. ಗೀತಾ ಶಿವರಾಜ್‌ ಕುಮಾರ್‌ ಗೆಲ್ಲಲಿದ್ದಾರೆ. ಇದರ ವಿರುದ್ಧ ಯಾರಾದರೂ ಚಾಲೆಂಜ್‌ ಮಾಡುವುದಿದ್ದರೆ ಬನ್ನಿ. ತಾನು ತನ್ನ ಟ್ರಾಕ್ಟರ್‌ ಪಣಕ್ಕಿಟಿದ್ದೇನೆ ಎಂದು ರವೀಂದ್ರ ಸವಾಲು ಹಾಕಿದ್ದಾರೆ.

ಇದನ್ನೂ ಓದಿ – ಐರಾವತ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ನೀಡಿದ ಕೆಎಸ್‌ಆರ್‌ಟಿಸಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment