ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 30 ಜೂನ್ 2020
ಸರ್ಕಾರದ ಸೂಚನೆಗಳನ್ನು ಅಧಿಕಾರಿಗಳು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿ, ಶಿಕಾರಿಪುರದ ಕಂಟೈನ್ಮೆಂಟ್ ಜೋನ್ನಲ್ಲಿರುವ ಜನರು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕುಂಬಾರ ಬೀದಿಯಲ್ಲಿ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ. ಆದರೆ ಒಂದು ವಾರ ಕಳೆದರೂ ಏರಿಯಾದಲ್ಲಿ ಸ್ಯಾನಿಟೈಸೇಷನ್ ಮಾಡಿಲ್ಲ. ಆರೋಗ್ಯ ತಪಾಸಣೆಯನ್ನೂ ನಡೆಸಿಲ್ಲ. ಸರ್ಕಾರ ಕೊಟ್ಟ ಯಾವುದೇ ಸೂಚನೆಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಅಂತರದಲ್ಲಿ ಪ್ರತಿಭಟನೆ
ಕಂಟೈನ್ಮೆಂಟ್ ಜೋನ್ನ ಒಳಗೆ ಸಾಮಾಜಿಕ ಅಂತರದಲ್ಲಿ ನಿಂತು ಜನರು ಪ್ರತಿಭಟನೆ ನಡೆಸಿದರು. ಮಾಸ್ಕ್ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಎಲ್ಲರ ಆರೋಗ್ಯ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಪ್ರತಿಭಟನೆ ಕೈಬಿಡುವಂತೆ ಮನವೊಸಲಿಸಿದರು.
ಕುಂಬಾರ ಬೀದಿ ನಿವಾಸಿಗಳಿಗೆ ಇವತ್ತು ಮಧ್ಯಾಹ್ನದಿಂದ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅಲ್ಲದೆ ಬೀದಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

- ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏ.14ರವರೆಗೆ ಗಡುವು ನಡಿದ ಭದ್ರಾವತಿ ರಾಜು, ಕಾರಣವೇನು?

- ಶಿವಮೊಗ್ಗದಲ್ಲಿ ಲವ್ ಲೆಟರ್ಸ್ ನಾಟಕ, ಈಗಲೇ ಕಾಯ್ದಿರಿಸಿ ಟಿಕೆಟ್, ಇಲ್ಲಿದೆ ಲಿಂಕ್

- ಸಿಗಂದೂರು ಸೇತುವೆ ಬಳಿ ಅಪಘಾತ, ಥಾರ್ ಪಲ್ಟಿ

- ಶಿವಮೊಗ್ಗ ಸಿಟಿಯಲ್ಲಿ ಬೈಕ್ ಅಪಘಾತ, ಪತ್ರಕರ್ತ ಸಾವು, ಹೇಗಾಯ್ತು ಘಟನೆ?

About The Editor
ನಿತಿನ್ ಆರ್.ಕೈದೊಟ್ಲು





