ಚಿಕನ್‌ ಸಾಲದ ವಿಚಾರವಾಗಿ ಗಲಾಟೆ, ಬಿಡಿಸಲು ಬಂದ ವ್ಯಕ್ತಿಗೆ ಟವೆಲ್‌ನಲ್ಲಿ ಕಲ್ಲು ಕಟ್ಟಿಕೊಂಡು ಹೊಡೆದ ಯುವಕ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

ಶಿರಾಳಕೊಪ್ಪ: ಚಿಕನ್ ಖರೀದಿಯ ಸಾಲದ (Credit) ವಿಚಾರವಾಗಿ ಅಂಗಡಿ ಮಾಲೀಕ ಮತ್ತು ಆತನ ಸಂಬಂಧಿಯ ಗಲಾಟೆ ತಡೆಯಲು ಹೋದ ವ್ಯಕ್ತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಗ್ರಾಮದ ಚಿಕನ್ ಅಂಗಡಿ ಮಾಲೀಕರು ಮತ್ತು ಆತನ ಸಹೋದರ ಸಂಬಂಧಿ ಯುವಕನ ನಡುವೆ ಸಾಲದ ಹಣ ನೀಡುವ ವಿಚಾರವಾಗಿ ಗಲಾಟೆ (Quarrel) ನಡೆಯುತ್ತಿತ್ತು. ರಾತ್ರಿ ಸುಮಾರು 10:30ರ ಸಮಯದಲ್ಲಿ ಅಲ್ಲಿಗೆ ಬಂದ ಮಂಜುನಾಥ್‌, ಗಲಾಟೆ ಮಾಡಬೇಡ ಮನೆಗೆ ಹೋಗು ಎಂದು ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕ ಮಂಜುನಾಥ್‌ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ತಾನು ತಂದಿದ್ದ ಕತ್ತಿಯಿಂದ (Sickle) ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

Shivamogga-Police-Jeep

ಟವೆಲ್‌ನಲ್ಲಿ ಕಲ್ಲು ಕಟ್ಟಿ ಹಲ್ಲೆ

ಕತ್ತಿಯಿಂದ ಹಲ್ಲೆ ನಡೆಸಿದಾಗ ಮಂಜುನಾಥ್‌ ಅವರ ಕೈಗೆ ಗಾಯವಾಗಿತ್ತು. ಸ್ಥಳೀಯರು ಬಂದು ಗಲಾಟೆ ಬಿಡಿಸಿದ್ದರು. ನಂತರ ಗುಡಿಯ ಹತ್ತಿರ ಗ್ರಾಮಸ್ಥರು ವಿಚಾರಣೆ ಮಾಡುತ್ತಿದ್ದಾಗ, ಯುವಕ ಟವೆಲ್‌ನಲ್ಲಿ ಕಲ್ಲನ್ನು (Stone) ಕಟ್ಟಿಕೊಂಡು ಬಂದು ಮಂಜುನಾಥ್‌ ಅವರ ಭುಜ ಮತ್ತು ಬೆನ್ನಿಗೆ ಹೊಡೆದಿದ್ದಾನೆ ಎಂದ ಆರೋಪಿಸಲಾಗಿದೆ. ನೇರಲಗಿ ಗ್ರಾಮದಲ್ಲಿ ನಡೆದ ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!