ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 APRIL 2023
SHIMOGA : ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶಾಂತವೀರಪ್ಪ ಗೌಡ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜಿನಾಮೆ (Resignation) ಘೋಷಿಸಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ವಿಧಾನಸಭೆ ಕ್ಷೇತ್ರದಿಂದ ಬಂಡಾಯವಾಗಿ ಸ್ಪಧಿ೯ಸಿರುವ ನಾಗರಾಜ ಗೌಡ ಅವರನ್ನು ಗೆಲ್ಲಿಸಲು ಪ್ರಚಾರ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬವನ್ನು ಸೋಲಿಸುತ್ತೇನೆ. ತಮ್ಮ ದೇಹ ಮಾತ್ರ ಕಾಂಗ್ರೆಸ್ನಿಂದ ಹೊರ ಹೋಗುತ್ತಿದೆ. ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಶಿವಮೊಗ್ಗ ಕಾಂಗ್ರೆಸ್ಗೆ ಆಘಾತ, ಬೆಂಬಲಿಗರೊಂದಿಗೆ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಶಾಸಕ
ಬಿ.ಎಸ್.ಯಡಿಯೂರಪ್ಪನವರ ಕುತಂತ್ರದಿಂದಲೆ ನಾಗರಾಜ ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ. ಈ ವಿಷಯದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಂದಿದ್ದಾರೆ. ಶಿಕಾರಿಪುರದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಗುರಿಯಿಂದ ಕಾಂಗ್ರೆಸ್ ಬಂಡಾಯ ಸ್ಪರ್ಧಿ ನಾಗರಾಜ ಗೌಡ ಅವರ ಪರ ನಿಂತಿದ್ದೇನೆ ಎಂದರು.
ಬಿ.ಎಸ್.ಯಡಿಯೂರಪ್ಪ ಭಾರೀ ಭ್ರಷ್ಟರು. ವರುಣ ಕ್ಷೇತ್ರದಲ್ಲಿ ಮಗನನ್ನು ನಿಲ್ಲಿಸುತ್ತೇನೆ ಎಂಬುದನ್ನು ಮು೦ದಿಟ್ಟುಕೊಂಡು. ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಇವರು ಸೂಚಿಸಿದ ಗೋಣಿ ಮಾಲತೇಶ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ. ಅವರ ಪುತ್ರ ವಿಜಯೇಂದ್ರನಷ್ಟು ಭ್ರಷ್ಟಾಚಾರಿ ಬೇರೆ ಯಾರೂ ಇಲ್ಲ. ಯಡಿಯೂರಪ್ಪ ಕುಟುಂಬ ಪ್ರಪಂಚದಲ್ಲಿ ಹಲವು ಆಸ್ತಿ ಮಾಡಿದೆ ಎಂದು ಆಪಾದಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಲಿಂಗರಾಜ ಗೌಡ, ಸಂತೋಷ್, ಮಂಜುನಾಥ್ ಮತ್ತಿತರರಿದ್ದರು.