ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021
ಶಿಕಾರಿಪುರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೋನ ಹರಡುವುದನ್ನು ತಡೆಯಲು ತಾಲೂಕಿನ ವಿವಿಧೆಡೆ ಲಾಕ್ ಡೌನ್ ಕೂಡ ಮಾಡಲಾಗಿದೆ.
ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್?
ಶಿಕಾರಿಪುರ ತಾಲೂಕಿನ ಬಳ್ಳಿಗಾವಿ, ಅಂಬಾರಗೊಪ್ಪ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ಹಿರೆಜಂಬೂರು, ಕಪ್ಪನಹಳ್ಳಿ, ನಲೆವಾಗಿಲು ವ್ಯಾಪ್ತಿಯಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಚಿಕ್ಕಮಾಗಡಿ, ಹಾರೊಗೊಪ್ಪ, ಮತ್ತಿಕೋಟೆ, ಮುದ್ದನಹಳ್ಳಿ, ಮುಡುಬ ಸಿದ್ದಾಪುರ, ಸುಣ್ಣದಕೊಪ್ಪ, ತಾಳಗುಂದ, ತರಲಘಟ್ಟ, ಉಡುಗಣಿಯಲ್ಲಿ 20ಕ್ಕೂ ಹೆಚ್ಚು ಸಕ್ರಿಯ ಕರೋನ ಪ್ರಕರಣಗಳಿವೆ.
ಬೇಗೂರು, ಈಸೂರು, ಗಾಮ, ಗೊದ್ದನಕೊಪ್ಪ, ಗುಡ್ಡದ ತುಮ್ಮಿನಕಟ್ಟೆ, ಹರಗಿ, ಹಿತ್ಲ, ಹೊಸೂರು, ಜಕ್ಕನಹಳ್ಳಿ, ಜಕ್ಕಿನಕೊಪ್ಪ, ಕಲ್ಮನೆ, ಮಳವಳ್ಳಿ, ಮಂಚಿಕೊಪ್ಪ, ಮಾರವಳ್ಳಿ, ನರ್ಸಾಪುರ, ತಡಗಣಿ, ತೊಗರ್ಸಿ ವ್ಯಾಪ್ತಿಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಪ್ರಕರಣಗಳಿವೆ
ಅಮ್ಟೆಕೊಪ್ಪ, ಅರಿಶಿಣಗೆರೆ, ಬಗನಕಟ್ಟೆ, ಬಿಳಿಕಿ, ಚಿಕ್ಕ ಜಂಬೂರು, ಚುರ್ಚಿಗುಂಡಿ, ಗೊಗ್ಗ, ಇನಾಮ್ ಅಗ್ರಹಾರ ಮುಚುಡಿ, ಕಾಗಿನಲ್ಲಿ, ಕಿಟ್ಟದಹಳ್ಳಿ, ಕೊರಟಿಗೆರೆ, ಹೋತನಕಟ್ಟೆ ವ್ಯಾಪ್ತಿಯಲ್ಲಿ ಹತ್ತಕ್ಕಿಂತಲೂ ಕಡಿಮೆ ಪ್ರಕರಣಗಳಿವೆ.
ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]