ಹುಚ್ಚರಾಯ ಸ್ವಾಮಿ ದರ್ಶನಕ್ಕೆ ಬರುತ್ತಿದ್ದ ಹಾವೇರಿ ಭಕ್ತರಿದ್ದ ಟಿಟಿ ವಾಹನ ಶಿಕಾರಿಪುರದಲ್ಲಿ ಪಲ್ಟಿ, ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿಕಾರಿಪುರ: ತಾಲೂಕಿನ ನೆಲವಾಗಿಲು ಕ್ರಾಸ್ ಬಳಿ ಟೆಂಪೋ ಟ್ರಾವೆಲರ್ (ಟಿಟಿ) ವಾಹನ ಪಲ್ಟಿಯಾಗಿ ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಆಷಾಢ ಮಾಸದ ಅಂಗವಾಗಿ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವರ ದರ್ಶನ ಪಡೆಯಲು ಹಾವೇರಿ ಜಿಲ್ಲೆಯ ಹರಳಹಳ್ಳಿ ನಿವಾಸಿಗಳು ಟಿಟಿ ವಾಹನವನ್ನು ಬಾಡಿಗೆಗೆ ಪಡೆದು ಹೊರಟಿದ್ದರು. ಶಿಕಾರಿಪುರದ ನೆಲವಾಗಿಲು ಕ್ರಾಸ್ ಸಮೀಪ ಅಪಘಾತ ಸಂಭವಿಸಿದೆ.

ACCIDENT-NEWS-GENERAL-IMAGE.

ಹೇಗಾಯ್ತು ಅಪಘಾತ?

ಟಿಟಿ ಚಾಲಕ ನಾಗರಾಜ ಬಾರಕಿ ವಾಹನವನ್ನು ಅತಿವೇಗ ಚಲಾಯಿಸುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರೊಂದನ್ನು ತಪ್ಪಿಸಲು ಹೋಗಿ ಟಿಟಿ ವಾಹನ ಸ್ಕಿಡ್ ಆಗಿ ರಸ್ತೆಗೆ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಪಾರವ್ವ, ಪುಷ್ಪ ಹಾಗೂ ಮಲ್ಲೇಶಪ್ಪ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದಂತೆ ಲಲಿತಾ, ಅವರ ಪತಿ ಶಿವಪ್ಪ, ಮಗ ಸಂದೀಪ್, ರತ್ನಮ್ಮ, ಹೊನ್ನಮ್ಮ, ಮಂಜುನಾಥ್ ಗೌಡ ಹಾಗೂ ಮಲ್ಲನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇವರನ್ನು 108 ಆಂಬುಲೆನ್ಸ್ ಮೂಲಕ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.