ಜಮೀನಿನಲ್ಲಿ ವಿದ್ಯುತ್ ಶಾಕ್, ಸಹೋದರರಿಬ್ಬರು ಸ್ಥಳದಲ್ಲೆ ಸಾವು

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 17 JUNE 2021

ವಿದ್ಯುತ್ ಶಾಕ್‍ಗೆ ಸಹೋದರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಜಮೀನಿಗೆ ಹೋದಾಗ ಘಟನೆ ಸಂಭವಿಸಿದೆ.

ಶಿಕಾರಿಪುರ ತಾಲೂಕು ಹಾರೋಗೊಪ್ಪದ ಬಿ.ಕ್ಯಾಂಪ್‍ನಲ್ಲಿ ಘಟನೆ ಸಂಭವಿಸಿದೆ. ಇಲ್ಲಿಯ ನಿವಾಸಿಗಳಾದ ಕುಮಾರ್ ನಾಯ್ಕ್ (35) ಮತ್ತು ಶಂಕರ ನಾಯ್ಕ್ (35) ಮೃತ ದುರ್ದೈವಿಗಳು.

ಸಹೋದರರು ಜಮೀನಿಗೆ ಹೋದಾಗ ಬೋರ್‍ವೆಲ್‍ಗೆ ಅಳವಡಿಸಿದ್ದ ವೈರ್‍ ಕೆಳಗೆ ಬಿದ್ದಿತ್ತು. ಇದನ್ನು ಸರಿಪಡಿಸಲು ಮುಂದಾದಾಗ ವಿದ್ಯುತ್ ಶಾಕ್ ತಗುಲಿದೆ. ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment