ಬಾರ್‌ ಮುಂದೆ ಬಿಯರ್‌ ಬಾಟಲಿಯಿಂದ ಯುವಕನ ಮೇಲೆ ದಾಳಿ, ಗಾಯ, ಆಗಿದ್ದೇನು?

ಶಿಕಾರಿಪುರ: ಬಾರ್ ಒಂದರ ಬಳಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ.

ಶಿಕಾರಿಪುರದ ವಿಜಯಲಕ್ಷ್ಮಿ ಬಾರ್ ಎದುರು ಘಟನೆ ನಡೆದಿದೆ. ಪ್ರಕಾಶ ಎಂಬುವವರು ಕೆಲಸ ಮುಗಿಸಿ ಸ್ನೇಹಿತನೊಂದಿಗೆ ಬಾರ್‌ಗೆ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಖಾಲಿ ಬಿಯರ್ ಬಾಟಲಿಗಳನ್ನು ಪ್ರಕಾಶನ ಬೈಕಿನ ಬ್ಯಾಗಿನಲ್ಲಿಟ್ಟು ಗಲಾಟೆ ತೆಗೆದಿದ್ದಾನೆ. ಇದನ್ನು ಪ್ರಶ್ನಿಸಿ ಬಾಟಲಿಗಳನ್ನು ಕೆಳಗೆಹಾಕಿದ್ದಕ್ಕೆ ಕುಪಿತಗೊಂಡ ಆ ವ್ಯಕ್ತಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

Shikaripura-Town-Police-Station

ಘಟನೆಯಲ್ಲಿ ಪ್ರಕಾಶನ ಎಡಗಣ್ಣಿನ ಕೆಳಭಾಗ ಹಾಗೂ ಹುಬ್ಬಿನ ಮೇಲೆ ಗಾಯವಾಗಿ ರಕ್ತ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಶಿಕಾರಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.