ಗಾಜನೂರು ತುಂಗಾ ಡ್ಯಾಂನ 12 ಗೇಟ್‌ ಓಪನ್‌, ಒಳ ಹರಿವು ಎಷ್ಟಿದೆ? ಹೊರ ಹೋಗುತ್ತಿರುವ ನೀರೆಷ್ಟು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE | 7 JULY 2023

GAJANURU : ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾದ ಹಿನ್ನೆಲೆ ತುಂಗಾ ಜಲಾಶಯಕ್ಕೆ (Tunga Dam) ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂನ 12 ಗೇಟ್‌ಗಳನ್ನು ಮೇಲೆತ್ತಲಾಗಿದೆ.

Gajanur-Tunga-Dam-2023-12-gates-opened.

ಒಳ, ಹೊರ ಹರಿವು ಎಷ್ಟಿದೆ?

ಗಾಜನೂರಿನ ತುಂಗಾ ಜಲಾಶಯಕ್ಕೆ (Tunga Dam) ಪ್ರಸ್ತುತ 25,971 ಕ್ಯೂಸೆಕ್‌ ಒಳ ಹರಿವು ಇದೆ. ಈಗಾಗಲೇ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿರುವುದರಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸದ್ಯ 25,936 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

ಇದನ್ನೂ ಓದಿ – ಶಿವಮೊಗ್ಗ ಸೇತುವೆ ಬಳಿ ಮೈದುಂಬಿದ ತುಂಗಾ ನದಿ, ಜಿಲ್ಲೆಯ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ, ಎಷ್ಟಿದೆ?

ಎಷ್ಟು ಗೇಟ್‌ ಓಪನ್‌ ಆಗಿವೆ?

ತುಂಗಾ ಜಲಾಶಯದಲ್ಲಿ ಸದ್ಯ 12 ಗೇಟ್‌ಗಳನ್ನು ತಲಾ 1 ಮೀಟರ್‌ನಷ್ಟು ಮೇಲೆತ್ತಲಾಗಿದೆ. ಇದರ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಗುರುವಾರ ಒಳ ಹರಿವು ಏರಿಕೆಯಾಗಿದ್ದರಿಂದ 10 ಗೇಟ್‌ಗಳನ್ನು ಮೇಲೆತ್ತಿ ನೀರು ಹೊರಗೆ ಬಿಡಲಾಗಿತ್ತು. ಇವತ್ತು ಇನ್ನು ಎರಡು ಗೇಟ್‌ಗಳನ್ನು ಮೇಲೆತ್ತಲಾಗಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment