ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಕುಂಸಿ: ಹಾರನಹಳ್ಳಿ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ₹15 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು (gold and silver) ಹಾಗೂ ನಗದು ದೋಚಿದ್ದಾರೆ. ಈ ಸಂಬಂಧ ಹಾರನಹಳ್ಳಿಯ ಈಶ್ವರ್ ಎಂಬುವವರು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈಶ್ವರ ಅವರು ಕುಟುಂಬದೊಂದಿಗೆ ಫೆಬ್ರವರಿ 24ರಂದು ಸಂಜೆ 5:30ಕ್ಕೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಶಿವಮೊಗ್ಗದ ಮಾರಿಕಾಂಬ ಜಾತ್ರೆಗೆ ತೆರಳಿದ್ದರು. ರಾತ್ರಿ 9 ಗಂಟೆಗೆ ಮನೆಗೆ ಹಿಂತಿರುಗಿದಾಗ, ಮನೆಯ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಬೀಗ ಒಡೆದಿರುವುದು ಕಂಡುಬಂದಿದೆ. ಮನೆಯ ಒಳಗೆ ಹೋಗಿ ನೋಡಿದಾಗ ಬೆಡ್‌ರೂಮ್‌ನಲ್ಲಿದ್ದ ಬೀರುವನ್ನು ತೆರೆದು ಕಳ್ಳತನ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಸರಗಳು, ಉಂಗುರಗಳು, ಓಲೆಗಳು ಹಾಗೂ ಬೆಳ್ಳಿಯ ದೇವರ ಮುಖವಾಡಗಳು ಮತ್ತು ಕರಡಿಗೆಗಳನ್ನು ದೋಚಿದ್ದಾರೆ. ಇದರೊಂದಿಗೆ ಬೀರುವಿನಲ್ಲಿದ್ದ ₹40,000 ನಗದು ಕಳ್ಳತನವಾಗಿವೆ. ಕಳುವಾದ ಒಟ್ಟು ಮೌಲ್ಯ ₹15,00,000 ಅಂದಾಜಿಸಲಾಗಿದೆ. ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ – ಮೊಬೈಲ್ ಕ್ಯಾಂಟೀನ್ ಯೋಜನೆ, ಅರ್ಜಿ ಆಹ್ವಾನಿಸಿದ ಪ್ರವಾಸೋದ್ಯಮ ಇಲಾಖೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

LATEST NEWS
- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

- ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್, 1 ಕೆ.ಜಿ ಬಕೆಟ್ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?

- ‘ಒಂದು ಕೋಟಿ ರುಪಾಯಿ ನೆರವು, ಸರ್ಕಾರಿ ನೌಕರಿ ಕೊಡಬೇಕು’, ಕುರುಬರ ವೇದಿಕೆ ಪಟ್ಟು

- ಸಚಿವ ಮಧು ಬಂಗಾರಪ್ಪ ಜನ್ಮದಿನ, ವಿದ್ಯಾರ್ಥಿಗಳು, ಪೌರ ಕಾರ್ಮಿಕರಿಗೆ ವಿಮಾನಯಾನ

- ವಾಸವಿ ಯುವಜನ ಸಂಘದ ಅಧ್ಯಕ್ಷರಾಗಿ ಶ್ರೀನಾಗ್, ಕನ್ನಿಕಾ ಸಖಿಯರ ಸಂಘದ ಅಧ್ಯಕ್ಷ ಶ್ವೇತಾ ಸಂದೀಪ್

About The Editor
ನಿತಿನ್ ಆರ್.ಕೈದೊಟ್ಲು






