SHIVAMOGGA LIVE NEWS | 25 FEBRURARY 2023
SHIMOGA : ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿದ್ದ ಶಕ್ತಿಶಾಲಿ ಉದ್ಭವ ಆಂಜನೇಯನ ಮೂರ್ತಿಯನ್ನು (Anjaneya Temple) ಪಕ್ಕದ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ದೇವಸ್ಥಾನಕ್ಕಾಗಿ ಜಾಗ ನೀಡಿ, ದೇಗುಲ ನಿರ್ಮಾಣಕ್ಕೆ ಹಣವನ್ನೂ ಕೊಡಲಾಗಿದೆ.
ರನ್ ವೇ ಪಕ್ಕದಲ್ಲೇ ಇದ್ದರು ದೇವಸ್ಥಾನ (Anjaneya Temple) ಕೆಡವಲು, ದೇವರನ್ನು ಸ್ಥಳಾಂತರ ಮಾಡಲು ಗುತ್ತಿಗೆದಾರರು, ಅಧಿಕಾರಿಗಳು ಹಿಂದೇಟು ಹಾಕಿದ್ದರು. ಆದರೆ ವಿಮಾನಯಾನ ಇಲಾಖೆ ಅಧಿಕಾರಿಗಳ ಸೂಚನೆ ಮತ್ತು ಭದ್ರತೆ ದೃಷ್ಟಿಯಿಂದ ಅನಿವಾರ್ಯವಾಗಿ ದೇವರನ್ನು ಸ್ಥಳಾಂತರ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಕ್ತಿಶಾಲಿ ದೇವರು
ವಿಮಾನ ನಿಲ್ದಾಣ ಪಕ್ಕದ ವಿನಾಯಕ ನಗರದ ನಿವಾಸಿಗಳು ಉದ್ಭವ ಆಂಜನೇಯನ ಪರಮ ಭಕ್ತರು. ಆಂಜನೇಯನಿಗೆ ನಿಷ್ಠೆಯಿಂದ ಪೂಜೆ ಸಲ್ಲಿಸುತ್ತಿದ್ದರು. ವರ್ಷಕ್ಕೊಮ್ಮೆ ಅಂಬು ಕಡಿಯಲು ದೇವಸ್ಥಾನಕ್ಕೆ ಬರುತ್ತಿದ್ದರು. ಗ್ರಾಮ ದೇವತೆ ದುರ್ಗಾಂಬಾ ದೇವಿಯ ಹೇಳಿಕೆಯಂತೆ ಖಾಲಿ ಜಮೀನಿನಲ್ಲಿ ಶೋಧ ನಡೆಸಿದಾಗ ಉದ್ಭವ ಅಂಜನೇಯನ ಕಲ್ಲು ಪತ್ತೆಯಾಗಿತ್ತು ಎಂದು ಊರಿನ ಹಿರಿಯರು ಸ್ಮರಿಸಿಕೊಳ್ಳುತ್ತಾರೆ.
ಆಗಲೆ ಕೆಡವಲು ಹೊರಟಿದ್ದರು
2008ರಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿದಾಗ ಮೊದಲಿಗೆ ಉದ್ಭವ ಆಂಜನೇಯನ ಗುಡಿ ಕೆಡವಲು ನಿರ್ಧರಿಸಲಾಗಿತ್ತು. ಗುಡಿ ಕೆಡವುವ ಯೋಚನೆ ಮಾಡುತ್ತಿದ್ದಂತೆ ಗುತ್ತಿಗೆದಾರ ಕಂಪನಿಗೆ ಆರ್ಥಿಕ ಸಂಕಷ್ಟಕ್ಕೀಡಾಯಿತು. ವಿಮಾನ ನಿಲ್ದಾಣ ಕಾಮಗಾರಿ ಸ್ಥಗಿತವಾಯಿತು ಎಂದು ಸ್ಥಳೀಯರು ನಂಬುತ್ತಾರೆ.
ಇದನ್ನೂ ಓದಿ – ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ಹೋಗುವವರು ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು
ದೇಗುಲ ಹಾಗೆ ಉಳಿಸಿಕೊಂಡಿದ್ದರು
ವಿಮಾನ ನಿಲ್ದಾಣ ಕಾಮಗಾರಿ ಪುನಾರಂಭವಾದಾಗ ರನ್ ವೇ ಅಕ್ಕಪಕ್ಕ ನೆಲ ಸಮತಟ್ಟು ಮಾಡಲಾಯಿತು. ದೊಡ್ಡ ಬಂಡೆಗಳನ್ನು ಪುಡಿಗಟ್ಟಲಾಯಿತು. ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಂಡಿದ್ದ ಜಮೀನಿನ ಚಹರೆಯನ್ನೆ ಬದಲಾಯಿಸಲಾತು. ಆದರೆ ಉದ್ಭವ ಆಂಜನೇಯನ ಗುಡಿಗೆ ಹಾನಿ ಮಾಡಿರಲಿಲ್ಲ. ಕಾಮಗಾರಿ ಪೂರ್ಣಗೊಂಡ ಬಳಿಕವು ದೇವರ ಗುಡಿ ಹಾಗೆ ಉಳಿದುಕೊಂಡಿತ್ತು.
ಇದನ್ನೂ ಓದಿ – ವಿಮಾನ ನಿಲ್ದಾಣ ಉದ್ಘಾಟನೆ, ಶಿವಮೊಗ್ಗದಲ್ಲಿ ಮಾರ್ಗ ಬದಲಾವಣೆ, ಯಾವ್ಯಾವ ಊರಿನವರಿಗೆ ಎಲ್ಲೆಲ್ಲಿದೆ ಪಾರ್ಕಿಂಗ್?
ವಿಮಾನಯಾನ ಇಲಾಖೆ ಅಧಿಕಾರಿಗಳ ತಕರಾರು
ರನ್ ವೇ ಸಮೀಪದಲ್ಲೇ ಗುಡಿ ಇದ್ದಿದ್ದರಿಂದ ವಿಮಾನಯಾನ ಇಲಾಖೆ ಅಧಿಕಾರಿಗಳು ತರಕಾರು ತೆಗೆದರು. ಸುರಕ್ಷತೆ ದೃಷ್ಟಿಯಿಂದ ಆಂಜನೇಯನ ಗುಡಿ ತೆರವು ಮಾಡುವ ಅನಿವಾರ್ಯತೆ ಇತ್ತು. ಅಲ್ಲದೆ ಸಮೀಪದಲ್ಲೆ ವಿಮಾನ ನಿಲ್ದಾಣಕ್ಕಾಗಿ ತಾತ್ಕಾಲಿಕ ಕಚೇರಿ ನಿರ್ಮಿಸಲಾಗತ್ತು. ಇದನ್ನು ಕೊನೆ ಹಂತದಲ್ಲಿ ತೆರವು ಮಾಡಲಾಯಿತು. ಹೀಗಾಗಿ ಗುತ್ತಿಗೆದಾರರು, ಅಧಿಕಾರಿಗಳು ಗ್ರಾಮಸ್ಥರ ಜೊತೆಗೆ ಸಭೆ ನಡೆಸಿದರು. ದೇವರ ಗುಡಿ ನಿರ್ಮಾಣಕ್ಕೆ ಜಾಗ, ಹಣದ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ – SHIMOGA AIRPORT JOBS ಹೆಸರಲ್ಲಿ ಆನ್‌ಲೈನ್‌ನಲ್ಲೆ ಸಂದರ್ಶನ, ಅಲ್ಲೇ ಹಣಕ್ಕೆ ಬೇಡಿಕೆ, ಅಕಾಂಕ್ಷಿಗಳೆ ಹುಷಾರ್
ಕಳೆದ ವಾರ ಉದ್ಭವ ಆಂಜನೇಯನನ್ನು ಗ್ರಾಮಸ್ಥರು ವಿಮಾನ ನಿಲ್ದಾಣದ ಆವರಣದಿಂದ ವಿನಾಯಕನಗರಕ್ಕೆ ತಂದಿದ್ದಾರೆ. ಆಂಜನೇಯನ ಮೂರ್ತಿಗೆ ಪೂಜೆ ಸಲ್ಲಿಸಿ, ಶಾಸ್ತ್ರೋಕ್ತವಾಗಿ ಊರಿಗೆ ಕೊಂಡೊಯ್ದು ಇಡಲಾಗಿದೆ. ಈಗ ದೇವಸ್ಥಾನ ನಿರ್ಮಾಣವಾಗುತ್ತಿದೆ.