ಗೋಡಾನ್‌ನಿಂದ ಅಡಿಕೆ ಮೂಟೆಗಳು ನಾಪತ್ತೆ, CCTV ಚೆಕ್‌ ಮಾಡಿದ ಮಾಲೀಕನಿಗೆ ಆಘಾತ, ಆಗಿದ್ದೇನು?

ಶಿವಮೊಗ್ಗ: ಗೋಡಾನ್‌ನ ಜಾಲರಿ ಮುರಿದು ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಅಡಿಕೆ ದೋಚಿದ್ದಾರೆ. ಹೊಳಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಅಡಿಕೆ ವ್ಯಾಪಾರಿ ಅಕ್ರವುಲ್ಲಾ ಖಾನ್ ಎಂಬುವವರಿಗೆ ಸೇರಿದ ಗೋಡಾನ್‌ನಲ್ಲಿ ಕೃತ್ಯ ನಡೆದಿದೆ. ಗೋಡಾನ್‌ನಲ್ಲಿ ಸುಮಾರು 80 ಮೂಟೆ ಅಡಿಕೆ ಸಂಗ್ರಹಿಸಿಡಲಾಗಿತ್ತು. ಅಕ್ರವುಲ್ಲಾ ಖಾನ್ ಅವರು ಕೆಲಸ ಮುಗಿಸಿ ಗೋಡಾನ್‌ಗೆ ರಾತ್ರಿ ಬೀಗ ಹಾಕಿ ತೆರಳಿದ್ದರು. ಮರುದಿನ ಬಂದು ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

Shimoga-Police-Jeep

ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳರು ರಾತ್ರಿ ವೇಳೆ ಜಾಲರಿ ಎತ್ತಿ ಒಳಗೆ ನುಗ್ಗಿರುವುದು ಗೊತ್ತಾಗಿದೆ ಎಂದು ಆರೋಪಿಸಲಾಗಿದೆ. 6 ಮೂಟೆಗಳಲ್ಲಿ ಇದ್ದ ಸುಮಾರು 4 ಕ್ವಿಂಟಾಲ್ 80 ಕೆಜಿ ತೂಕದ ಅಡಿಕೆ ಕಳ್ಳತನವಾಗಿದೆ. ಇದರ ಮೌಲ್ಯ ₹2,50,000 ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.