ಆಯನೂರು ATMನಲ್ಲಿ ಹಣ ಬಿಡಿಸಿದ ರೈತ, 20 ನಿಮಿಷದಲ್ಲೇ ಕಾದಿತ್ತು ಶಾಕ್‌, ಆಗಿದ್ದೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS, 22 JANUARY 2025

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಆಯನೂರು : ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ನೆರವು ನೀಡುವಂತೆ ನಟಿಸಿ, ATM ಕಾರ್ಡ್‌ ಬದಲಿಸಿ ರೈತರೊಬ್ಬರಿಗೆ ವಂಚಿಸಲಾಗಿದೆ. ಎಟಿಎಂ ಕಾರ್ಡ್‌ ಅದಲು ಬದಲಾಗಿ 20 ನಿಮಿಷದ ಒಳಗೆ 40 ಸಾವಿರ ರೂ. ಹಣ ಡ್ರಾ ಮಾಡಲಾಗಿದೆ.

ಅರನಲ್ಲಿ ಗ್ರಾಮದ ದೇವಪ್ಪ, ಆಯನೂರಿನ ಬ್ಯಾಂಕ್‌ ಒಂದರ ಎಟಿಎಂ ಸೆಂಟರ್‌ನಲ್ಲಿ ಹಣ ಬಿಡಿಸಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಅಪರಿಚಿತರು ದೇವಪ್ಪ ಅವರಿಗೆ ಹಣ ಬಿಡಿಸಲು ನೆರವಾಗಿದ್ದರು. ದೇವಪ್ಪ ಅವರು ಸೂಚಿಸಿದಂತೆ 10 ಸಾವಿರ ರೂ. ಬಿಡಿಸಿ ಕೊಟ್ಟಿದ್ದರು. ಎಟಿಎಂ ಮೆಷಿನ್‌ನಿಂದ ಕಾರ್ಡ್‌ ಹೊರತೆಗೆದು ಕೊಡುವಾಗ ಆ ಅಪರಿಚಿತರು, ದೇವಪ್ಪ ಅವರ ಕಾರ್ಡ್‌ ಬದಲು ಬೇರೊಂದು ಕಾರ್ಡ್‌ ಕೊಟ್ಟಿದ್ದರು.

Prashanth-Loan-Advertisement.

20 ನಿಮಿಷದಲ್ಲಿ 40 ಸಾವಿರ ಮಾಯ

ಎಟಿಎಂ ಕಾರ್ಡ್‌ ಬದಲಾದ ವಿಚಾರ ಕೇವಲ 20 ನಿಮಿಷದಲ್ಲಿ ದೇವಪ್ಪ ಅವರಿಗೆ ಗೊತ್ತಾಗಿತ್ತು. ಕೂಡಲೆ ಬ್ಯಾಂಕ್‌ನ ಕಾಲ್‌ ಸೆಂಟರ್‌ಗೆ ಕರೆ ಮಾಡಿ ಕಾರ್ಡ್‌ ಬ್ಲಾಕ್‌ ಮಾಡಿಸಿದ್ದರು. ಅಷ್ಟರಲ್ಲಾಗಲೆ ವಂಚಕರು ಹಾರನಹಳ್ಳಿ ಮತ್ತು ಸವಳಂಗದ ಎಟಿಎಂ ಕೇಂದ್ರಗಳಿಂದ 40 ಸಾವಿರ ರೂ. ಹಣ ವಿತ್‌ ಡ್ರಾ ಮಾಡಿದ್ದರು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

TOURISM-WEBSITE.

ಹೆಚ್ಚುತ್ತಿದೆ ಇಂತಹ ವಂಚನೆ

ಎಟಿಎಂ ಕೇಂದ್ರಗಳಲ್ಲಿ ನೆರವು ನೀಡುವಂತೆ ನಟಿಸಿ ಕಾರ್ಡ್‌ ಅದಲು ಬದಲು ಮಾಡಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂಬಂಧ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಎಟಿಎಂ ಕೇಂದ್ರಗಳಲ್ಲಿ ಹಣ ಬಿಡಿಸುವಾಗ ಎಚ್ಚರ ವಹಿಸಬೇಕಿದೆ.

ಇದನ್ನೂ ಓದಿ » ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್‌ ಕಾಗೋಡು ತಿಮ್ಮಪ್ಪ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment