ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE | 31 MAY 2023
SHIMOGA : ಕ್ಷುಲಕ ವಿಚಾರಕ್ಕೆ ಇಬ್ಬರು ಯುವಕರನ್ನು ಬಸವನಗಂಗೂರಿನ ಕಲ್ವು ಕ್ವಾರಿ ಬಳಿ ಎಳೆದೊಯ್ದು ಮನಸೋಯಿಚ್ಛೆ ಹಲ್ಲೆ (Attack) ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಲಾಗಿದೆ. ಇಬ್ಬರು ಯುವಕರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ನವುಲೆ ಸಮೀಪದ ಬಡಾವಣೆಯೊಂದರ ನಿವಾಸಿಯಾಗಿರುವ ವಿದ್ಯಾರ್ಥಿ ಮತ್ತು ಆತನ ಸ್ನೇಹಿತ (ಹೆಸರು ಬೇಡ ಎಂದು ಮನವಿ ಮಾಡಿದ ಹಿನ್ನಲೆ) ಮೇ 22ರಂದು ಬೈಕಿನಲ್ಲಿ ಮನೆ ಕಡೆಗೆ ತೆರಳುತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪರಿಚಿತ ಯುವಕರು ಬೈಕ್ ಅಡ್ಡಿಗಟ್ಟಿದ್ದಾರೆ. ವಿದ್ಯಾರ್ಥಿ ಮತ್ತು ಆತನ ಸ್ನೇಹಿತನನ್ನು ಒತ್ತಾಯವಾಗಿ ಕಾರಿನಲ್ಲಿ ಕೂರಿಸಿಕೊಂಡು ಬಸವನಗಂಗೂರಿನ ಕಲ್ಲು ಕ್ವಾರಿಯತ್ತ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಯ ಸಂಬಂಧಿಗೂ ಹಲ್ಲೆಕೋರರಲ್ಲಿ ಒಬ್ಬನಿಗೂ ವೈಮನಸಿತ್ತು. ವಿದ್ಯಾರ್ಥಿ ತನ್ನ ಸಂಬಂಧಿಯ ಪರವಾಗಿ ನಿಂತಿದ್ದಕ್ಕೆ ಮತ್ತೊಂದು ಗುಂಪಿನವರು ಸಿಟ್ಟಾಗಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ನವುಲೆ ಕೆರೆ ಏರಿ ಮೇಲೆ ತಪ್ಪಿದ ದುರಂತ, ಕೆಲಕಾಲ ಸ್ಥಳೀಯರಲ್ಲಿ ಆತಂಕ, ಟಿಪ್ಪರ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ
ಹಲ್ಲೆ ವೇಳೆ ಓರ್ವ ಯುವಕ ಕೈಗೆ ಪಂಚ್ ಹಾಕಿಕೊಂಡು ವಿದ್ಯಾರ್ಥಿಗೆ ಹೊಡೆದಿದ್ದಾನೆ. ವಿದ್ಯಾರ್ಥಿಯ ಸ್ನೇಹಿತನ ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದೆ. ಮನಸೋಯಿಚ್ಛೆ ಹಲ್ಲೆ (Attack) ಮಾಡಿ ಇಬ್ಬರನ್ನು ಸ್ಥಳದಲ್ಲೇ ಬಿಟ್ಟು ಹಲ್ಲೆಕೋರರು ಪರಾರಿಯಾಗಿದ್ದರು. ಸುಸ್ತಾಗಿದ್ದ ಇಬ್ಬರು ಸುಧಾರಿಸಿಕೊಂಡು ಮುಖ್ಯ ರಸ್ತೆವರೆಗೂ ಬಂದು ಆಟೋದಲ್ಲಿ ತೆರಳಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ – ಜನ ಶತಾಬ್ದಿ ರೈಲು 3 ಗಂಟೆ ಲೇಟ್, ರಾತ್ರಿ ಬದಲು ಮಧ್ಯರಾತ್ರಿ ಶಿವಮೊಗ್ಗ ತಲುಪಿದ ಟ್ರೈನ್, ಪ್ರಯಾಣಿಕರು ಹೈರಾಣು
ವಿದ್ಯಾರ್ಥಿಯ ತುಟಿ, ತಲೆ ಭಾಗದಲ್ಲಿ ಗಾಯವಾಗಿ ರಕ್ತ ಸುರಿಯುತ್ತಿತ್ತು. ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಯ ಸ್ನೇಹಿತನ ಬೆನ್ನಿಗೆ ಹೊಲಿಗೆ ಹಾಕಲಾಗಿದೆ. ಭವಿಷ್ಯದ ದೃಷ್ಟಿಯಿಂದ ಇಬ್ಬರು ದೂರು ನೀಡಲು ಹಿಂದೇಟು ಹಾಕಿದ್ದರು. ಕುಟುಂಬದೊಂದಿಗೆ ಚರ್ಚೆ ನಡೆಸಿ ಎಂಟು ಮಂದಿ ಮತ್ತು ಇತರೆ ಕೆಲವರ ವಿರುದ್ಧ ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

