ಕೊಮ್ಮನಾಳು ಗ್ರಾಮದಲ್ಲಿ ಮನೆ ಗೇಟಿನೊಳಗೆ ನಿಲ್ಲಿಸಿದ್ದ ಪಲ್ಸರ್ ಬೈಕ್ ನಾಪತ್ತೆ

SHIVAMOGGA LIVE NEWS | 30 ಮಾರ್ಚ್ 2022

ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಶಿವಮೊಗ್ಗದಲ್ಲಿ ಮನೆ ಗೇಟಿನೊಳಗೆ ನಿಲ್ಲಿಸಿದ್ದ ಪಲ್ಸರ್ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕೊಮ್ಮನಾಳು ಗ್ರಾಮದ ಪುನೀತ್ ಕುಮಾರ್ ಎಂಬುವವರಿಗೆ ಸೇರಿದ ಪಲ್ಸರ್ 125 ಬೈಕ್ ಕಳ್ಳತನವಾಗಿದೆ.

ಹೇಗಾಯ್ತು ಕಳ್ಳತನ?

ಪುನೀತ್ ಅವರು 2020ರಲ್ಲಿ ಪಲ್ಸರ್ ಬೈಕ್ ಖರೀದಿಸಿದ್ದರು. ಕೊಮ್ಮನಾಳು ಗ್ರಾಮದ ತಮ್ಮ ಮನೆಯ ಗೇಟಿನೊಳಗೆ ನಿತ್ಯ ಬೈಕ್ ನಿಲ್ಲಿಸುತ್ತಿದ್ದರು. ಮಾರ್ಚ್ 12ರಂದು ರಾತ್ರಿ ಬೈಕನ್ನು ಮನೆ ಗೇಟಿನೊಳಗೆ ನಿಲ್ಲಿಸಿದ್ದರು. 12 ಗಂಟೆಗೆ ನೋಡಿದಾಗ ಬೈಕ್ ಇತ್ತು. ಬೆಳಗ್ಗೆ 5 ಗಂಟೆಗೆ ನೋಡಿದಾಗ ಬೈಕ್ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎಲ್ಲೆಡೆ ಹುಡುಕಾಡಿದ ಪುನೀತ್ ಅವರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

bike theft reference image

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment