ಚೋರಡಿ ಬಳಿ ಭೀಕರ ಅಪಘಾತ ಕೇಸ್‌, ಸಾವನ್ನಪ್ಪಿರುವವರೆಷ್ಟು? ಗಾಯಾಳುಗಳೆಷ್ಟು? ಈವರೆಗೂ ಏನೇನಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 MAY 2023

SHIMOGA : ಕುಂಸಿ ಬಳಿ ಖಾಸಗಿ ಬಸ್ಸುಗಳು (Collision) ಮುಖಾಮುಖಿ ಡಿಕ್ಕಿಯಾಗಿದ್ದು, ಈವರೆಗೂ ನಾಲ್ವರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Two-Bus-Collides-at-Choradi-in-Shimoga.

ಶಿವಮೊಗ್ಗ – ಸಾಗರ ಹೆದ್ದಾರಿಯ ಚೋರಡಿ ಬಳಿ ಕುಮದ್ವತಿ ಸೇತುವೆ ಸಮೀಪ ಘಟನೆ ಸಂಭವಿಸಿದೆ. ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿದ್ದು(Collision), ಮುಂಭಾಗ ನಜ್ಜುಗುಜ್ಜಾಗಿದೆ.

Bus Collision at Choradi

ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೆ ಆಂಬುಲೆನ್ಸ್‌ ಮೂಲಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ.

Bus Collision at Choradi

ಇನ್ನು, ಅಪಘಾತದ ರಭಸಕ್ಕೆ ಬಸ್ಸುಗಳು ಒಂದರೊಳಗೆ ಒಂದು ನುಗ್ಗಿವೆ. ಜೆಸಿಬಿ ಬಳಸಿ ಬಸ್ಸುಗಳನ್ನು ಬೇರ್ಪಡಿಸಲಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಅಪಘಾತಕ್ಕೀಡಾದ ಒಂದು ಬಸ್ಸು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿತ್ತು. ಮತ್ತೊಂದು ಬಸ್ಸು ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು.

ಇದನ್ನೂ ಓದಿ – BREAKING NEWS – ಚೋರಡಿ ಬಳಿ ಭೀಕರ ಅಪಘಾತ

ಅಪಘಾತದಿಂದಾಗಿ ಶಿವಮೊಗ್ಗ – ಸಾಗರ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಎರಡು ಬದಿಯಲ್ಲಿ ಸುಮಾರು ಎರಡು ಕಿ.ಮೀ.ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಕುಂಸಿ ಮತ್ತು ಶಿವಮೊಗ್ಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿ‍ಸ್ಥಿತಿ ನಿಯಂತ್ರಿಸುತ್ತಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 11, 2023

Leave a Comment