ಶಿವಮೊಗ್ಗ: ತಾಲೂಕಿನ ಹೊಳೆಬೆನವಳ್ಳಿ ಗ್ರಾಮದ ತೋಟವೊಂದರಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಒಳಗೆ ನಾಗರಹಾವು ಸೇರಿಕೊಂಡು ಬೈಕ್ ಮಾಲೀಕರಿಗೆ ಆತಂಕ ಮೂಡಿಸಿತ್ತು. ಕೂಡಲೆ ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಗ್ರಾಮದ ರೈತ ದುರ್ಗಪ್ಪ ಎಂಬುವರು ತೋಟದಲ್ಲಿ ಜೆಸಿಬಿ ಕೆಲಸ ನಡೆಯುತ್ತಿದ್ದ ಕಾರಣ ತಮ್ಮ ಬೈಕನ್ನು ಬದಿಗೆ ನಿಲ್ಲಿಸಿದ್ದರು. ಈ ವೇಳೆ ಮಣ್ಣಿನ ಗುಡ್ಡದ ಕಡೆಯಿಂದ ಬಂದ ನಾಗರಹಾವು ನೇರವಾಗಿ ಬೈಕ್‌ನ ಒಳಭಾಗಕ್ಕೆ ಸೇರಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಬೈಕ್ ಒಳಗೆ ಅಡಗಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

“ಹಾವುಗಳು ಸಾಮಾನ್ಯವಾಗಿ ಮರೆ ಇರುವ ಜಾಗಗಳು, ಸೌದೆ, ಚೀಲಗಳು ಹಾಗೂ ವಾಹನಗಳ ಒಳಭಾಗದಲ್ಲಿ ಆಶ್ರಯ ಪಡೆಯುತ್ತವೆ. ಸಾರ್ವಜನಿಕರು ಇಂತಹ ಸಂದರ್ಭ ಹಾವನ್ನು ತಾವೇ ಓಡಿಸಲು ಅಥವಾ ಹೊಡೆಯಲು ಹೋಗಿ ಅಪಾಯ ತಂದುಕೊಳ್ಳಬಾರದು. ಹಾವುಗಳು ರೈತನ ಮಿತ್ರನಾಗಿದ್ದು, ಪರಿಸರ ಸಮತೋಲನಕ್ಕೆ ಇವುಗಳ ರಕ್ಷಣೆ ಅಗತ್ಯ”
– ಸ್ನೇಕ್ ಕಿರಣ್, ಉರಗ ರಕ್ಷಕ

