ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020
ಶಿವಮೊಗ್ಗ ತಾಲೂಕು ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದ ಡಾಕ್ಟರ್ ಒಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಇವರಿಂದ ಹಲವರು ಚಿಕಿತ್ಸೆ ಪಡೆದಿದ್ದು, ಈ ಭಾಗದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ವೈದ್ಯೆಗೆ ಸೋಂಕು ತಗುಲಿದ್ದು ಹೇಗೆ?
ವೃದ್ದರೊಬ್ಬರು (ಪೇಷೆಂಟ್ ನಂಬರ್ 1305) ಆರೋಗ್ಯ ಸಮಸ್ಯೆಗಾಗಿ ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ವೈದ್ಯರು ತಪಾಸಣೆ ನಡೆಸಿದ್ದರು. ಇದಾದ ಬಳಿಕ ಪಿ1305ಗೆ ಕರೋನ ದೃಢವಾಗಿತ್ತು. ಕರೋನ ರಿಪೋರ್ಟ್ ಬರುವ ಮುನ್ನ ವೈದ್ಯೆ ಹಲವರಿಗೆ ಚಿಕಿತ್ಸೆ ನೀಡಿದ್ದರು. ವರದಿ ಬರುತ್ತಿದ್ದಂತೆ ವೈದ್ಯೆ ಮತ್ತು ಸಿಬ್ಬಂದಿ ಕ್ವಾರಂಟೈನ್ಗೆ ಒಳಗಾಗಿದ್ದರು.
ಆಯನೂರು ಸುತ್ತಮುತ್ತ ಆತಂಕ
ಸೋಂಕಿತ ವೈದ್ಯೆ ಕುರಿತು ಆಯನೂರು ಸುತ್ತಮುತ್ತ ಜನರಿಗೆ ಉತ್ತಮ ಅಭಿಪ್ರಾಯವಿದೆ. ಹೆರಿಗೆ ಮಾಡಿಸುವುದರಲ್ಲಿ ಈ ವೈದ್ಯೆ ಖ್ಯಾತಿ ಪಡೆದಿದ್ದರು. ಹಾಗಾಗಿ ಸುತ್ತಮುತ್ತಲ ಗ್ರಾಮದ ಜನರು, ಯಾವುದೇ ಆರೋಗ್ಯ ಸಮಸ್ಯೆ ಇದ್ದರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರು ಚಿಕಿತ್ಸೆಗೆ ಬರುತ್ತಿದ್ದರು. ಈಗ ವೈದ್ಯೆಗೆ ಕರೋನ ಪಾಸಿಟಿವ್ ಬಂದಿರುವುದರಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಪಿ1305 ಬಿಡುಗಡೆ, ವೈದ್ಯೆಗೆ ಪಾಸಿಟಿವ್
ವೈದ್ಯೆಗೆ ಸೋಂಕು ತಗುಲಲು ಕಾರಣವಾದ ಬಾಳೆಕೊಪ್ಪದ ಪಿ1305 ಸೋಂಕಿನಿಂದ ಗುಣಮುಖವಾಗಿದ್ದಾರೆ. ಅವರನ್ನು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಅದೇ ದಿನ ವೈದ್ಯೆಗೆ ಕರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರಾಥಮಿಕ ಸಂಪರ್ಕದ ಕಾರಣ ವೈದ್ಯೆಯ ಪತಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422