ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021
ಕರೋನ ಈಗ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಸಾವು, ನೋವು ಉಂಟು ಮಾಡುತ್ತಿದೆ. ಇದು ಜನರಲ್ಲಿ ಭೀತಿ ಹೆಚ್ಚಿಸಿದೆ. ಈ ನಡುವೆ ಕರೋನ ತಡೆಗೆ ಹಲವು ಕಡೆ ಸೀಲ್ ಡೌನ್ ಮಾಡಲಾಗಿದೆ.
ಶಿವಮೊಗ್ಗ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 700 ಸಕ್ರಿಯ ಕರೋನ ಪ್ರಕರಣಗಳಿವೆ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಇನ್ನಿಲ್ಲದ ಕ್ರಮ ಕೈಗೊಳ್ಳಲಾಗುತ್ತಿದೆ.
ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್?
ಶಿವಮೊಗ್ಗ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಕೆಲವು ಕಡೆ 40ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿರುವುದು ಕಂಡು ಬಂದಿದೆ. ಕೋಹಳ್ಳಿ, ಕುಂಸಿ, ಮತ್ತೂರು ವ್ಯಾಪ್ತಿಯಲ್ಲಿ 40ಕ್ಕಿಂತಲೂ ಹೆಚ್ಚು ಸೋಂಕಿತರಿದ್ದಾರೆ.
ಬಿ.ಬೀರನಹಳ್ಳಿ, ಮಲ್ಲಾಪುರ, ಮೇಲಿನ ಹನಸವಾಡಿ, ಸೋಗಾನೆ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಅಬ್ಬಲಗೆರೆ, ಬಿದರೆ, ಹಾಡೋನಹಳ್ಳಿ, ಹರಮಘಟ್ಟ, ಕೊರಹಳ್ಳಿ, ಮುದ್ದಿನಕೊಪ್ಪ, ಸಂತೆಕಡೂರು ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕೇಸ್ಗಳಿವೆ.
ಅಗಸವಳ್ಳಿ, ಆಯನೂರು, ಬೇಡರಹೊಸಹಳ್ಳಿ, ಚೋರಡಿ, ಗಾಜನೂರು, ಹಾರನಹಳ್ಳಿ, ಹೊಳಲೂರು, ಹೊಳೆಬೆನವಳ್ಳಿ, ಹೊಸಹಳ್ಳಿ, ಕೋಟೆಗಂಗೂರು, ಪುರದಾಳು, ಶೆಟ್ಟಿಹಳ್ಳಿ, ಸಿರಿಗೆರೆ, ಸೂಗೂರು, ಉಂಬ್ಳೆಬೈಲು ವ್ಯಾಪ್ತಿಲ್ಲಿ 10ಕ್ಕೂ ಹೆಚ್ಚು ಸಕ್ರಿಯ ಪ್ರಕಣಗಳಿವೆ.
ಬಾಳೆಕೊಪ್ಪ, ಹಸೂಡಿ, ಕಡೇಕಲ್, ಕೊಮ್ಮನಾಳು, ಕೂಡ್ಲಿ, ಕುಂಚೇನಹಳ್ಳಿ, ಮಂಡಘಟ್ಟ, ನಿದಿಗೆ, ರಾಮನಗರ, ತುಪ್ಪೂರು ವ್ಯಾಪ್ತಿಯಲ್ಲಿ ಹತ್ತಕ್ಕಿಂತಲೂ ಕಡಿಮೆ ಸೋಂಕಿತರಿದ್ದಾರೆ.
ಕೊನಗವಳ್ಳಿ ಮತ್ತು ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹೊತ್ತಿಗೆ ಕರೋನ ಪಾಸಿಟಿವ್ ಪ್ರಕರಣಗಳಿಲ್ಲ.
ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422