ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹2.50 ಲಕ್ಷ ಪಡೆದು ನಕಲಿ ನಾಣ್ಯಗಳನ್ನು (gold coin) ನೀಡಿ ವಂಚಿಸಲಾಗಿದೆ. ಶಿವಮೊಗ್ಗ ತಾಲೂಕು ಬುಳ್ಳಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಮಂಜನಗೌಡ ಎಂಬುವವರು ವಂಚನೆಗೊಳಗಾಗಿದ್ದಾರೆ. ಮಂಜನಗೌಡ ಅವರು ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದಿದ್ದರು. ಈ ಸಂದರ್ಭ ರಮೇಶ ಎಂಬಾತನ ಪರಿಚಿಯವಾಗಿ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ರಮೇಶ್ ತಮ್ಮೂರಿನ ಅಜ್ಜನಿಗೆ 5 ಕೆಜಿ ಚಿನ್ನದ ನಾಣ್ಯ ಸಿಕ್ಕಿವೆ. ಅರ್ಧ ಬೆಲೆಗೆ ಕೊಡಿಸುವುದಾಗಿ ಮಂಜನಗೌಡರಿಗೆ ನಂಬಿಸಿದ್ದಾನೆ.
ಇದನ್ನೂ ಓದಿ : ಎದುರು ಮನೆಗೆ ನುಗ್ಗಿದ್ದ ಭದ್ರಾವತಿ ವ್ಯಕ್ತಿಗೆ ಜೈಲು, ದಂಡ, ಎಷ್ಟು ವರ್ಷ ಶಿಕ್ಷೆ?
ಇದನ್ನು ನಂಬಿದ ಮಂಜನಗೌಡ ಅವರು ಬುಳ್ಳಾಪುರಕ್ಕೆ ಬಂದಿದ್ದರು. ಅಲ್ಲಿ ರಮೇಶನ ಅಣ್ಣ ಹಾಗೂ ಮತ್ತೊಬ್ಬ ವ್ಯಕ್ತಿಗೆ ಒಟ್ಟು ₹2.50 ಲಕ್ಷ ಹಣ ನೀಡಿ ನಾಣ್ಯಗಳನ್ನು ಪಡೆದುಕೊಂಡಿದ್ದರು. ಊರಿಗೆ ಹೋಗಿ ಪರೀಕ್ಷಿಸಿದಾಗ ಆ ನಾಣ್ಯಗಳು ನಕಲಿ ಎಂದು ತಿಳಿದುಬಂದಿವೆ.

ಘಟನೆ ಸಂಬಂಧ ರಮೇಶ, ಆತನ ಅಣ್ಣ ಹಾಗೂ ಅಜ್ಜನ ವಿರುದ್ಧ ಮಂಜನಗೌಡ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LATEST NEWS
- ಬಂಕ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ, ಏನಿದು?

- ಇವತ್ತು ರಾಶಿ, ಗೊರಬಲು ಅಡಿಕೆ ರೇಟ್ ಎಷ್ಟಿದೆ? – ಇಲ್ಲಿದೆ ಇಂದಿನ ಅಡಿಕೆ ಧಾರಣೆ

- ಆರು ಕಾಲುಗಳ ಕರು ಜನನ, ನೋಡಲು ದೌಡಾಯಿಸಿದ ಜನ

- ದುರ್ಗಿಗುಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಯಾವಾಗ? ಯಾರಿಗೆಲ್ಲ ಅವಕಾಶವಿದೆ?

- ಅರ್ಧ ಬೆಲೆಗೆ ಚಿನ್ನ, ಶಿವಮೊಗ್ಗದ ಬುಳ್ಳಾಪುರದ ತೆಂಗಿನ ತೋಟದಲ್ಲಿ ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು










