ತಮ್ಮಡಿಹಳ್ಳಿಯಲ್ಲಿ ಬೆಳಿಗ್ಗೆ ತೋಟದ ಮನೆ ಬಳಿ ಬಂದ ರೈತನಿಗೆ ಕಾದಿತ್ತು ಆಘಾತ

ಶಿವಮೊಗ್ಗ: ಕುಂಸಿಸಮೀಪದ ತಮ್ಮಡಿಹಳ್ಳಿ ಗ್ರಾಮದ ತೋಟದ ಮನೆಯಲ್ಲಿದ್ದ ₹2 ಲಕ್ಷ ಮೌಲ್ಯದ 5 ಜರ್ಸಿ ತಳಿಯ ಹಸುಗಳನ್ನು ಕಳ್ಳತನ ಮಾಡಲಾಗಿದೆ. ಗ್ರಾಮದ ರೈತ ಶಂಕರ್ ಟಿ.ಸಿ. ಅವರಿಗೆ ಸೇರಿದ ಹಸುಗಳು ಕಳುವಾಗಿವೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಂಕರ್ ಅವರು ತಮ್ಮಡಿಹಳ್ಳಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ 5 ಜರ್ಸಿ ಹಸುಗಳನ್ನು ಕಟ್ಟಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ತೋಟಕ್ಕೆ ಬಂದು ನೋಡಿದಾಗ ಹಸುಗಳು ನಾಪತ್ತೆ ಆಗಿರುವುದು ಗೊತ್ತಾಗಿದೆ. ಕಪ್ಪು ಬಣ್ಣದ ಜರ್ಸಿ ಹಸು, 9 ತಿಂಗಳ ಗಬ್ಬವಾಗಿದ್ದ ಕಾಫಿ ಬಣ್ಣದ ಹಸು, ಬೂದು ಬಣ್ಣದ ಹಸು, ಕೆಂಪು-ಕಪ್ಪು ಮಿಶ್ರಿತ ಬಣ್ಣದ ಜರ್ಸಿ ಮಣಕ ಹಾಗೂ ಕೆಂಪು ಬಣ್ಣದ ಕರು ಸೇರಿ ಒಟ್ಟು ₹2 ಲಕ್ಷ ಮೌಲ್ಯದ ಹಸುಗಳನ್ನು ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Police-Jeep-at-Shimoga-General-Image