ಶಿವಮೊಗ್ಗ: ತಾಲೂಕಿನ ಗೊಲ್ಲರಕೊಪ್ಪ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅರಣ್ಯ ಇಲಾಖೆ (Forest Department) ಇರಿಸಿದ್ದ ಡಿಜಿಟಲ್ ಕ್ಯಾಮೆರಾ ಕಳುವಾಗಿದೆ (Theft).
ಅರಣ್ಯ ಇಲಾಖೆಯು ಹುಲಿ ಗಣತಿಗಾಗಿ ಗೊಲ್ಲರಕೊಪ್ಪ ಗ್ರಾಮದ ವಡ್ಡಗಟ್ಟಿಸರ ಕೆರೆಯ ರಸ್ತೆಯ ಪಕ್ಕದಲ್ಲಿ ಡಿಜಿಟಲ್ ಕ್ಯಾಮೆರಾವನ್ನು (Cuddeback Digital Camera) ಅಳವಡಿಸಿತ್ತು. ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕ್ಯಾಮೆರಾ ಅಳವಡಿಸಿದ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿನ ಕ್ಯಾಮೆರಾ ಮತ್ತು ಅದಕ್ಕೆ ಅಳವಡಿಸಲಾಗಿದ್ದ ಮೆಮೊರಿ ಕಾರ್ಡ್ಗಳು (Memory Card) ನಾಪತ್ತೆಯಾಗಿದ್ದವು.

ಕಳುವಾದ ಕ್ಯಾಮೆರಾ ಮತ್ತು ಮೆಮೊರಿ ಕಾರ್ಡ್ನ ಅಂದಾಜು ಮೌಲ್ಯ ₹25,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಆಯನೂರು ವಲಯದ ಮಲ್ಲಾಪುರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶರತ್ ಕುಮಾರ್ ಅವರು ದೂರು ನೀಡಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.