ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | COMMISSION | 22 ಏಪ್ರಿಲ್ 2022
2006ಕ್ಕಿಂತಲೂ ಮೊದಲ ಬಿಜೆಪಿ ನಾಯಕರ ಬಳಿ ಎಷ್ಟು ಆಸ್ತಿ ಇತ್ತು. ಈಗ ಎಷ್ಟು ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂಬುದನ್ನ ಜನರು ಗಮನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತುಂಗಾ, ಭದ್ರಾ ಸಂಗಮ ಕ್ಷೇತ್ರ ಕೂಡ್ಲಿಯಲ್ಲಿ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ನಾಯಕರ ಬಳಿ ಮೊದಲು ಎಷ್ಟು ಆಸ್ತಿ ಇತ್ತು. ಈಗೆಷ್ಟು ಆಸ್ತಿ ಇದೆ. ಶಿವಮೊಗ್ಗ ನಗರದಲ್ಲಿ ಯಾರೆಲ್ಲ ಎಷ್ಟು ಆಸ್ತಿ ಮಾಡಿದ್ದಾರೆ ಅನ್ನುವುದನ್ನು ಜನರು ಗಮನಿಸಬೇಕು ಎಂದರು.
ಕಮಿಷನ್ ಪ್ರಮಾಣ ದುಪ್ಪಟ್ಟಾಗಿದೆ
ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕಮಿಷನ್ ದಂಧೆ ನಡೆಯುತ್ತಿತ್ತು. ಬಿಜೆಪಿ ಸರ್ಕಾರ ಬಂದಾಗ ಕಮಿಷನ್ ದುಪ್ಪಟ್ಟಾಯಿತು. ಇದೆ ಕಾರಣಕ್ಕೆ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ರೈತರ ಬೆಳೆಗೆ ಬೆಲೆ ದುಪ್ಪಟ್ಟು ಮಾಡಲು ಸರ್ಕಾರ ಪ್ರಯತ್ನ ಮಾಡಲಿಲ್ಲ. ಆದರೆ ಕಮಿಷನ್ (COMMISSION) ಮಾತ್ರ ದುಪ್ಪಟ್ಟು ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ಸ್ವತಂತ್ರ ಸರ್ಕಾರದಿಂದ ಲೂಟಿಗೆ ತಡೆ
ಸರ್ಕಾರಕ್ಕೆ ದುಡ್ಡಿಗೆ ದಾರಿದ್ರ್ಯ ಬಂದಿಲ್ಲ. ಖಾಜಾನೆ ಖಾಲಿ ಆಗಲು ಜನ ಬಿಟ್ಟಿಲ್ಲ. ಆದರೆ ಖಜಾನೆಯಲ್ಲಿನ ಹಣ ಲುಟಿ ಆಗುತ್ತಿದೆ. ಇದನ್ನು ತಡೆಯಲು ಸ್ವತಂತ್ರ ಸರ್ಕಾರ ಕೊಡಿ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ | ಕಮಿಷನ್ ಬಗ್ಗೆ ಸ್ವಾಮೀಜಿ ಆರೋಪ, ದಾಖಲೆ ನೀಡುವಂತೆ ಈಶ್ವರಪ್ಪ ಆಗ್ರಹ
LATEST NEWS
- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

- ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

About The Editor
ನಿತಿನ್ ಆರ್.ಕೈದೊಟ್ಲು
















