ಶಿವಮೊಗ್ಗ LIVE
ಶಿವಮೊಗ್ಗ: ಅಕ್ರಮ ಮದ್ಯ (Liquor Protest) ಮಾರಾಟದ ಆರೋಪದ ಹಿನ್ನೆಲೆ ಮಹಿಳೆಯರು ಗಾಜನೂರಿನಲ್ಲಿ ನಡೆಸಿದ ಪ್ರತಿಭೆಟನೆ ವಿಕೋಪಕ್ಕೆ ಹೋಗಿದೆ. ದೂರು, ಪ್ರತಿದೂರು ದಾಖಲಾಗಿದೆ. ತುಂಗಾನಗರ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಬಾರ್ ಮುಂದೆಯೆ ಪ್ರತಿಭಟನೆ, ಆಕ್ರೋಶ
ಗಾಜನೂರು ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬೆಳಗಿನ ಜಾವವೆ ಗಂಡಸರು, ಯುವಕರು ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಗಾಜನೂರಿನ ಬಾರ್ನಿಂದಲೇ ಹಳ್ಳಿ ಹಳ್ಳಿಯ ಮನೆಗಳಲ್ಲಿ ಮಾರಾಟಕ್ಕೆ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎಂಬುದು ಮಹಿಳೆಯರ ಆರೋಪ.
ಇದೇ ಕಾರಣಕ್ಕೆ ಮಹಿಳೆಯರು ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿದ್ದರು. ಅಂಗಡಿ ಮುಂಭಾಗ ಪ್ರತಿಭಟನೆ ನಡೆಸಿದರು. ಬಾರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ದೂರು, ಪ್ರತಿದೂರು, ಒಟ್ಟು ಮೂರು ಕೇಸ್
ಪ್ರತಿಭಟನೆಯ ಬೆನ್ನಿಗೆ ಮಹಿಳೆಯರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ಇದರ ಬೆನ್ನಿಗೆ ಮಹಿಳೆಯರು ವಿರುದ್ಧ ಎರಡು ಪ್ರತ್ಯೇಕ ಕೇಸ್ ದಾಖಲಾಗಿದೆ.

ದೂರು 1 : ಜಾತಿ ನಿಂದನೆ ಕೇಸ್
ಪ್ರತಿಭಟನೆ ಸಂದರ್ಭ ಬಾರ್ ಮಾಲೀಕರ ಬಳಿ ಹೋದಾಗ ವಾಗ್ವಾದ ನಡೆದಿದೆ. ಬಾರ್ ಮಾಲೀಕರ ಪರ ಮಾತನಾಡುತ್ತಿದ್ದ ಸುಬ್ರಮಣಿ, ಕಿರಣ್ ಮತ್ತು ರಮೇಶ್ ಎಂಬುವವರು ಮಹಿಳೆಯರಿಗೆ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಅಪಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ » ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?
ದೂರು 2 : ಬೆಂಕಿ ಹಚ್ಚಿ ಸುಡುವ ಬೆದರಿಕೆ
ಸುರೇಶ್ ಎಂಬುವವರು ಮಹಿಳೆಯರ ವಿರುದ್ಧ ದೂರು ನೀಡಿದ್ದಾರೆ. ವೈನ್ ಶಾಪ್ ಮಾಲೀಕರಿಗೆ ಬೆಂಬಲ ನೀಡುತ್ತಿದ್ದೀಯ ಎಂದು ಆರೋಪಿಸಿ ಮಹಿಳೆಯರು ತಮ್ಮನ್ನು ಅಡ್ಡಗಟ್ಟಿ ಕಪಾಳಕ್ಕೆ ಹೊಡೆದಿದ್ದಾರೆ. ವೈನ್ ಶಾಪ್ ಸಹಿತ ನಿನಗೆ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ಆಪಾದಿಸಿದ್ದಾರೆ.
ದೂರು 3 : ಮಹಿಳೆಯರ ದಾಳಿ, ನಷ್ಟ
ತಮ್ಮ ಮದ್ಯದಂಗಡಿಯ ಮೇಲೆ ಸುಮಾರು 20 ಮಹಿಳೆಯರು ದಾಳಿ ನಡೆಸಿದ್ದಾರೆ. ಅಂಗಡಿಯ ಪೀಠೋಪಕರಣಗಳನ್ನು ಒಡೆದು ಹಾಕಿ ಸುಮಾರು 30,000 ರೂಪಾಯಿಗಳ ನಷ್ಟ ಉಂಟುಮಾಡಿದ್ದಾರೆ ಎಂದು ಮದ್ಯದಂಗಡಿ ಮಾಲೀಕ ಕೆ.ಟಿ.ಮಿತ್ರ ಆರೋಪಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ » ಲೈಟ್ ವಿಚಾರಕ್ಕೆ ಅಣ್ಣ, ಅತ್ತಿಗೆ ರಾಡ್ನಲ್ಲಿ ಹೊಡೆದ ವ್ಯಕ್ತಿ, ಏನಿದು ರಾದ್ಧಾಂತ?
LATEST NEWS
- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

- ಶಾಲೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡ ಶಿಕ್ಷಕ

About The Editor
ನಿತಿನ್ ಆರ್.ಕೈದೊಟ್ಲು





