ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟೆಂಬರ್ 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಕ್ರೆಬೈಲು ಬಿಡಾರದ ಹಿರಿಯ ಆನೆ ಗಂಗೆ ಕೊನೆಯುಸಿರೆಳೆದಿದೆ. ಅನಾರೋಗ್ಯಕ್ಕೀಡಾಗಿದ್ದ ಗಂಗೆ ಆನೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕೆಲವು ತಿಂಗಳಿಂದ ಗಂಗೆ ಆನೆಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಿಡಾರದಲ್ಲೇ ಗಂಗೆಗೆ ಚಿಕಿತ್ಸೆ ನೀಡಲಾಗುತಿತ್ತು. ಕಳೆದ ಎರಡು ವಾರದಿಂದ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಇವತ್ತು ಗಂಗೆ ಮೃತಪಟ್ಟಿದೆ.
ಬಿಡಾರದಲ್ಲಿ ಶೋಕ
ಸಕ್ರೆಬೈಲು ಬಿಡಾರದ ಅತ್ಯಂತ ಹಿರಿಯ ಆನೆ ಗಂಗೆ. 1971ರಲ್ಲಿ ಕಾಕನಕೋಟೆಯಲ್ಲಿ ಗಂಗೆ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಅಲ್ಲಿಂದ ಗಂಗೆ ಆನೆಯನ್ನು ಶಿವಮೊಗ್ಗದ ಸಕ್ರೆಬೈಲು ಬಿಡಾರಕ್ಕೆ ಕಳುಹಿಸಲಾಗಿತ್ತು. ಆಗಿನಿಂದಲೂ ಗಂಗೆ ಆನೆ ಈ ಬಿಡಾರದ ಪ್ರಮುಖ ಆನೆಗಳಲ್ಲಿ ಒಂದಾಗಿದೆ.
ಖೆಡ್ಡಾ ಕಾರ್ಯಾಚರಣೆಯಲ್ಲಿ ನೈಪುಣ್ಯ
ಗಂಗೆ ಆನೆಯು ಹೆಣ್ಣಾನೆಗಳಲ್ಲಿ ಸ್ಪುರದ್ರೂಪಿಯಾದ ಆನೆಯಂಬ ಹೆಗ್ಗಳಿಕೆ ಪಡೆದಿತ್ತು. ಅಲ್ಲದೆ ಖೆಡ್ಡಾ ಕಾರ್ಯಾಚರಣೆಯಲ್ಲಿ ನೈಪುಣ್ಯ ಹೊಂದಿತ್ತು. ರಾಜ್ಯದ ವಿವಿಧೆಡೆ ಪುಂಡಾನೆಗಳನ್ನು ಖೆಡ್ಡಾಗೆ ಕೆಡವುವ ಕಾರ್ಯಾಚರಣೆಯಲ್ಲಿ ಗಂಗೆ ಆನೆ ಪಾಲ್ಗೊಂಡು ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಗಂಗೆಯನ್ನು ಕಂಡು ಪುಂಡಾನೆಗಳು ಬಳಿಗೆ ಬರುತ್ತಿದ್ದವು. ಈ ವೇಳೆ ಅವುಗಳನ್ನು ಖೆಡ್ಡಾಗೆ ಕೆಡವಿಕೊಳ್ಳಲಾಗುತಿತ್ತು.
ಬಿಡಾರದ ಹಿರಿಯಜ್ಜಿಯಾಗಿದ್ದ ಗಂಗೆ
ಗಂಗೆ ಆನೆಯು ಸಕ್ರೆಬೈಲು ಬಿಡಾರದ ಹಿರಿಯಜ್ಜಿಯಾಗಿದ್ದಳು. ಈಕೆಯ ಆರು ಮರಿಗಳು ಇದೆ ಬಿಡಾರದ ಸದಸ್ಯರು. ಅಲ್ಲದೆ ಈ ಬಿಡಾರದಲ್ಲಿ ಯಾವುದೆ ಆನೆ ಮರಿ ಹಾಕಿದರೂ ಆರೈಕೆಗೆ ಗಂಗೆ ಆನೆಯನ್ನು ಬಿಡಲಾಗುತಿತ್ತು. ಅಲ್ಲದೆ ತಾಯಿ ಆನೆಯಿಂದ ಮರಿಯನ್ನು ಬೇರ್ಪಡಿಸುವ ವೀನಿಂಗ್ ಪ್ರಕ್ರಿಯೆ ಸಂದರ್ಭದಲ್ಲೂ ಗಂಗೆ ಪ್ರಮುಖ ಪಾತ್ರ ವಹಿಸುತ್ತಿದ್ದಳು.
ಗಂಗೆ ಆನೆಯನ್ನು ಕಳೆದುಕೊಂಡು ಸಕ್ರೆಬೈಲು ಬಿಡಾರ ದುಃಖದಲ್ಲಿದೆ. ಗಂಗೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200