NEWS HIGHLIGHTS
ಶಿವಮೊಗ್ಗ: ತಾಲೂಕಿನ ವೀರಗಾರನ ಭೈರನಕೊಪ್ಪ ಗ್ರಾಮದ ಬಳಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ವೈದ್ಯಾಧಿಕಾರಿಗಳು ಸೇರಿ ಮೂವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಆಯುಷ್ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಡಾ. ಕ್ಷಮಾ, ಆಯುರ್ವೇದ ವೈದ್ಯಾಧಿಕಾರಿ ಡಾ. ಸುರೇಶ್ ಹಾಗೂ ಆಯುಷ್ ಇಲಾಖೆಯ ಬೊಲೆರೊ ಜೀಪ್ ಚಾಲಕ ಶಶಾಂಕ್ ಗಾಯಾಳುಗಳು. ಡಾ. ಸುರೇಶ್ ಮತ್ತು ಜೀಪ್ ಚಾಲಕ ಶಶಾಂಕ್ ಅವರಿಗೆ ತರಚಿದ ಗಾಯಗಳಾಗಿವೆ. ಡಾ. ಕ್ಷಮಾ ಅವರ ಕುತ್ತಿಗೆ, ಬೆನ್ನು ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ವೈದ್ಯಾಧಿಕಾರಿಗಳು ಇಲಾಖೆಯ ವಾಹನದಲ್ಲಿ ಶಿವಮೊಗ್ಗದಿಂದ ಆನಂದಪುರಂ ಕಡೆಗೆ ತೆರಳುತ್ತಿದ್ದರು.

ವೀರಗಾರನ ಭೈರನಕೊಪ್ಪದ ಬಳಿ ಸಾಗರ ಕಡೆಯಿಂದ ಬಂದ ಮಹೀಂದ್ರಾ ಎಕ್ಸ್‌ಯುವಿ ಕಾರು ಬೊಲೆರೊ ಜೀಪಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಕೂಡಲೆ ಶಿವಮೊಗ್ಗದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:➤ ಹೊಳಲೂರಿನಲ್ಲಿ ಬೈಕ್ ಕಳ್ಳತನ, ಹೇಗಾಯ್ತು ಕೃತ್ಯ?