ಶಿವಮೊಗ್ಗ: ಮನೆಯೊಂದರ ಹೆಂಚು ತೆಗೆದು ಗ್ಯಾಸ್ ಸಿಲಿಂಡರ್, ಮೊಬೈಲ್ ಫೋನ್ ಮತ್ತು ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಬನ್ನಿಕೆರೆ ಗ್ರಾಮದ ಮುಜಾಹಿದಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (looted).➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಮುಜಾಹಿದಾ ಅವರ ಪತಿಗೆ ಆರೋಗ್ಯ ಸಮಸ್ಯೆಯಾಗಿತ್ತು. ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಅಲ್ಲಿಂದ ವಾಪಸ್ ಬಂದಾಗ ಮನೆಯ ಹೆಂಚು ತೆಗೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ಭಾರತ್ ಗ್ಯಾಸ್ ಕಂಪನಿಯ ಸಿಲಿಂಡರ್, ಬೀರುವಿನಲ್ಲಿಟ್ಟಿದ್ದ ₹10,000 ನಗದು, ರೆಡ್ ಮೀ ಮೊಬೈಲ್ ಫೋನ್ ಕಳ್ಳತನವಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಹೊಸ ವರ್ಷದ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿದ ಯುವಕರು, ಚೇರ್‌ಗಳಿಂದಲೇ ಬಡಿದಾಟ