ಜಿಂಕೆ ಮಾಂಸ ಬೇಯಿಸುವ ಹೊತ್ತಿಗೆ ದಾಳಿ, ಪಾತ್ರೆ ಸಹಿತ ಆರೋಪಿಗಳು ಅರೆಸ್ಟ್‌

SHIVAMOGGA LIVE NEWS | 13 FEBRUARY 2024

SHIMOGA : ಜಿಂಕೆ ಮಾಂಸ ಬೇಯಿಸುವ ಹೊತ್ತಿಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗೇಟ್‌ ಸಮೀಪ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಹನುಮಂತ, ಆಂಜನಪ್ಪ, ರಾಮಣ್ಣ ಬಂಧಿತರು. ಜಿಂಕೆ ಮಾಂಸ, ಅಡುಗೆಗೆ ಬಳಸಿದ್ದ ಪಾತ್ರೆಗಳು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಶಿವರಾತ್ರಪ್ಪ, ಡಿಆರ್‌ಎಫ್‌ಒಗಳಾದ ಪವನ್‌ ಮಹೇಂದ್ರಕರ್‌, ಗುರುಸ್ವಾಮಿ, ಅಬ್ದುಲ್‌ ಕರೀಂ, ಸಿಬ್ಬಂದಿ ಸುನಿಲ್‌, ಶ್ರೀಕಾಂತ್‌, ಸುಧೀರ್‌, ಸೂರ್ಯವಂಶಿ, ಲಕ್ಷ್ಮಣ, ರಿಯಾಜ್‌, ದಿನೇಶ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Kalleshwara-Enterprises.webp

ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಒಂದೇ ದಿನ 6 ಮಂದಿಗೆ ಕೆಎಫ್‌ಡಿ ಪಾಸಿಟಿವ್‌, ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ದೌಡು

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment