| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS
SHIMOGA | ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೇ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ದುಮ್ಮಳ್ಳಿಯಲ್ಲಿ (DUMMALLI) ಘಟನೆ ಸಂಭವಿಸಿದೆ.
.png)
ಬುಳ್ಳಾಪುರದ ಅಮಿತಾ (27) ಮೃತಳು. ಈಕೆಯ ಪತಿ ದುಮ್ಮಳ್ಳಿಯ (DUMMALLI) ಕರುಣಾಕರ (36) ಎಂಬಾತ ಹತ್ಯೆ ಮಾಡಿದವನು.
ಹೇಗಾಯ್ತು ಘಟನೆ? DUMMALLI
ಮನೆಯಲ್ಲಿ ಯಾರೂ ಇರದ ವೇಳೆ ಗಂಡ, ಹೆಂಡತಿ ನಡುವೆ ಜಗಳವಾಗಿದೆ. ಈ ವೇಳೆ ಕರುಣಾಕರ ಅಮಿತಾಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅಮಿತಾಳ ಕುತ್ತಿಗೆ, ಭುಜ, ಕವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ಕೂಡಲೆ ಅಕ್ಕಪಕ್ಕದವರು ಬಂದು ಅಮಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಹತ್ಯೆಗೆ ಕಾರಣವೇನು?
ಎಂಬಿಎ ಪದವೀಧರನಾಗಿರುವ ಕರುಣಾಕರ ಎರಡೂವರೆ ವರ್ಷದ ಹಿಂದೆ ಬುಳ್ಳಾಪುರದ ಅಮಿತಾಳೊಂದಿಗೆ ಮದುವೆಯಾಗಿದ್ದ. ಮದುವೆ ಸಮಯದಲ್ಲಿ ಬಂಗಾರ ಮತ್ತು ಹಣ ಕೊಟ್ಟಿದ್ದರೂ ಇನ್ನೂ ಹೆಚ್ಚಿಗೆ ಬೇಕು ಎಂದು ಕರುಣಾಕರ ಪೀಡಿಸುತ್ತಿದ್ದ. ಕೊಡಲು ಸಾದ್ಯವಾಗದ ಹಿನ್ನೆಲೆಯಲ್ಲಿ ಜಗಳ ತೆಗೆದು ದುಷ್ಕೃತ್ಯ ಎಸಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರುಣಾಕರನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಹೈವೇ ರಸ್ತೆಯಲ್ಲಿ ಉಪನ್ಯಾಸಕನ ಕಾರು ಅಡ್ಡಗಟ್ಟಲು ಯತ್ನ, ಹಿಂಬದಿ ಗಾಜಿಗೆ ಕಲ್ಲು ತೂರಾಟ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಾಲಿವುಡ್ ನಟರ ಫೋಟೊಗಳಿಗೆ ಚಪ್ಪಲಿ ಏಟು, ಕಾರಣವೇನು?
- ಆಯನೂರು ಸೇರಿ ಹಲವೆಡೆ ಡಿ.17ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಓದಲು ಇಲ್ಲಿ ಕ್ಲಿಕ್ ಮಾಡಿ
- ಅಡಿಕೆ ಧಾರಣೆ | 16 ಡಿಸೆಂಬರ್ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?
- ತಾಳಗುಪ್ಪ – ಬೆಂಗಳೂರು ರೈಲು ಅರಸೀಕೆರೆವರೆಗೆ ಮಾತ್ರ, ಯಶವಂತಪುರ ಎಕ್ಸ್ಪ್ರೆಸ್ಗೆ ಬದಲಿ ಮಾರ್ಗ
- ಶಿವಮೊಗ್ಗದಲ್ಲಿ ಮೂರು ದಿನ ಕಣ್ಣಿನ ಉಚಿತ ತಪಾಸಣೆ, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?
- ಶಿವಮೊಗ್ಗದ ಬಸವನಗುಡಿ, ವಿದ್ಯಾನಗರದಲ್ಲಿ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ
- ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು
- ಇವತ್ತು ಉತ್ತರಾಷಾಢ ನಕ್ಷತ್ರ, ದ್ವಾದಶಿ, ರಾಶಿ ಫಲ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
![]()