ಶಿವಮೊಗ್ಗ – ಕುಂಸಿ ಮಧ್ಯೆ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಬಂದ್‌, ವಾಹನಗಳಿಗೆ ಪರ್ಯಾಯ ಮಾರ್ಗ, ಯಾವುದದು?

SHIVAMOGGA LIVE NEWS | 5 MAY 2024

RAILWAY NEWS : ಶಿವಮೊಗ್ಗ – ಕುಂಸಿ ನಡುವೆ ಇರುವ ರೈಲ್ವೆ ಲೆವೆಲ್‌ ಕ್ರಾಸಿಂಗ್‌ನಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಮೇ 5ರ ಬೆಳಗ್ಗೆ 8 ಗಂಟೆಯಿಂದ ಮೇ 6ರ ಸಂಜೆ 6 ಗಂಟೆವರೆಗೆ ರೈಲ್ವೆ ಗೇಟ್‌ ಮುಚ್ಚಲಾಗುತ್ತದೆ. ಈ ಹಿನ್ನೆಲೆ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.  

ಪರ್ಯಾಯ ಮಾರ್ಗ

ಕಾಶಿಪುರ ಮೂಲಕ ಉಷಾ ನರ್ಸಿಂಗ್ ಹೋಂ, ಜೈಲ್ ಸರ್ಕಲ್, ವಿನೋಬನಗರ, ಪೊಲೀಸ್ ಚೌಕಿ ಮುಖಾಂತರ ಲಘು ಮತ್ತು ಭಾರಿ ಗಾತ್ರದ ವಾಹನಗಳು ಮತ್ತು ಪಿ ಅಂಡ್‌ ಟಿ ಕಾಲೋನಿಯಿಂದ ಕೆಳ ರಸ್ತೆಯ ಮುಖಾಂತರ ಲಘು ವಾಹನಗಳು ಸಂಚರಿಸುವುದು.

ಸವಳಂಗ ರಸ್ತೆ ಮೂಲಕ ಉಷಾ ನರ್ಸಿಂಗ್ ಹೋಂ – ಜೈಲ್ ಸರ್ಕಲ್ – ವಿನೋಬನಗರ ಪೊಲೀಸ್ ಚೌಕಿ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.

Kalleshwara-Enterprises.webp

ಇದನ್ನೂ ಓದಿ – ಲೋಕಸಭೆ ಚುನಾವಣೆ ಮಧ್ಯೆ ಶಿವಮೊಗ್ಗದಲ್ಲಿ ಮತ್ತೊಂದು ಚುನಾವಣೆಗೆ ಸಿದ್ಧತೆ, ಮೇ 9ಕ್ಕೆ ಅಧಿಸೂಚನೆ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment