RAINFALL NEWS, 20 OCTOBER 2024 : ಶಿವಮೊಗ್ಗದಲ್ಲಿ ಸಿಡಿಲು ಅಪ್ಪಳಿಸಿ ರಸ್ತೆ (Road) ಹಾನಿಗೀಡಾಗಿದೆ. ಹುಲಿ ಮತ್ತು ಸಿಂಹಧಾಮ ಸಮೀಪದ ಮುದ್ದಿನಕೊಪ್ಪದಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ.
ಸಿಡಿಲು ಅಪ್ಪಳಿಸಿ ರಸ್ತೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯಲ್ಲಿ ಡಾಂಬರ್ ಕಿತ್ತು ಬಂದಿದೆ. ಈ ಸಂದರ್ಭ ಈ ಮಾರ್ಗದಲ್ಲಿ ಯಾರೂ ಸಂಚರಿಸುತ್ತಿರಲಿಲ್ಲ ಎಂದು ಹೇಳಲಾಗಿದೆ. ಅಧಿಕಾರಿಗಳ ಪರಿಶೀಲನೆ ಬಳಿಕವೆ ಸಿಡಿಲು ಅಪ್ಪಳಿಸಿದೆಯೊ ಇಲ್ಲವೊ ಅನ್ನುವುದು ಖಚಿತವಾಗಲಿದೆ.

ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ ತಾಲೂಕಿನ ವಿವಿಧೆಡೆ ಜೋರು ಮಳೆ, ಎಲ್ಲೆಲ್ಲಿ?


