ಶಿವಮೊಗ್ಗ: ಲೋಕಾಯುಕ್ತ ಅಧಿಕಾರಿಗಳ ಎರಡು ತಂಡ ಶಿವಮೊಗ್ಗ ತಾಲೂಕಿನ ವಿವಿಧ ಅಂಗನವಾಡಿಗಳಿಗೆ ದಿಢೀರ್ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಈ ವೇಳೆ ಹಲವು ನ್ಯೂನತೆ ಕಂಡು ಬಂದಿದೆ. ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ವರದಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್ ಮತ್ತು ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್.ಕುಸಲಾಪುರ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ಆಯನೂರು ವ್ಯಾಪ್ತಿಯ 4 ಅಂಗನವಾಡಿಗಳು, ಕುಂಸಿ ವ್ಯಾಪ್ತಿಯ 4 ಅಂಗನವಾಡಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಪ್ರತ್ಯೇಕ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು.
ಏನೇನೆಲ್ಲ ನ್ಯೂನತೆ ಕಾಣಿಸಿತು?
- ಪುಷ್ಠಿ ಆಹಾರದ ಪ್ಯಾಕೇಟ್ ಮೇಲೆ ಉತ್ಪಾದನಾ ದಿನಾಂಕ ಮತ್ತು ಅವಧಿ ಮೀರಿದ ದಿನಾಂಕ ನಮೂದು ಮಾಡಿಲ್ಲ.
- ವೈದ್ಯಾಧಿಕಾರಿಕಾರಿಗಳು ಮೂರು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿಲ್ಲ. ಮೇಲ್ವಿಚಾರಕರು ನಿರಂತರವಾಗಿ ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿಲ್ಲ.
- ಸ್ಟೋರ್ ರೂಂನಲ್ಲಿ ಸ್ವಚ್ಚತೆಯನ್ನು ನಿರ್ವಹಣೆ ಮಾಡಿಲ್ಲ. ವಾಟರ್ ಪಿಲ್ಟರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಂಗನಡಾಡಿ ಕೇಂದ್ರಗಳ ಸುತ್ತಲು ಸ್ವಚ್ಛತೆ ಇಲ್ಲ. ಅಳವಡಿಸಿರುವ ಯು.ಪಿ.ಎಸ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
- ಇಂದು ತಯಾರಿಸಿದ ಉಪ್ಪಿಟ್ಟಿನಲ್ಲಿ ಯಾವುದೇ ತರಕಾರಿ ಬಳಸಿಲ್ಲ. ಕೋಹಳ್ಳಿ ಪೇಟೆ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಅವಧಿ ಮೀರಿದ ರಾಗಿ ಹಿಟ್ಟು ಬಳಸುತ್ತಿರುವುದು ಕಂಡುಬಂದಿದೆ.

- ಮೇಲಾಧಿಕಾರಿಗಳ ಮೊಬೈಲ್ ನಂಬರ್ ಮತ್ತು ಸಹಾಯವಾಣಿ ಚಾರ್ಟ್ ಹಾಕಿಲ್ಲ. ಶೌಚಾಲಯದಲ್ಲಿ ಬೆಳಕಿನ ವ್ಯವಸ್ಥೆ ಮತ್ತು ಸರಿಯಾದ ನೀರಿನ ವ್ಯವಸ್ಥೆ ಇಲ್ಲ.
- ಆಹಾರ ದಾಸ್ತಾನು ರಿಜಿಸ್ಟರ್ (ಸ್ಟಾಕ್ ರಿಜಿಸ್ಟರ್) ಮತ್ತು ಖರ್ಚಿನ ರಿಜಿಸ್ಟರ್‌ಗೆ ಸರಿಯಾಗಿ ಹೊಂದಾಣಿಕೆ ಆಗಲಿಲ್ಲ. ಅಂಗನವಾಡಿ ಕೇಂದ್ರದಲ್ಲಿ ಇರುವ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ.
ರಜೆಯಂದು ಹಾಜರಾತಿ ಪುಸ್ತಕದಲ್ಲಿ ಸಹಿ
ಆಯನೂರು-01 ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆಯಲ್ಲಿದೆ. ಆಯನೂರು -02 ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಜೂ.7ರಂದು ಹಾಜರಾತಿ ಪುಸ್ತಕದಲ್ಲಿ ಆಕಸ್ಮಿಕ ರಜೆ ಎಂದು, ಮತ್ತು ಅಂಗನವಾಡಿ ಸಹಾಯಕಿ ಸಹಿಯನ್ನು ಮಾಡಿದ ನಮೂದು ಕಂಡುಬಂದಿದೆ. ಆದರೆ ಆ ದಿನ ಬಕ್ರಿದ್ ಹಬ್ಬದ ಸರ್ಕಾರಿ ರಜೆ ಇತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕಾಯುಕ್ತ ಎಸ್.ಪಿ ಮಂಜುನಾಥ ಚೌದರಿ ಮಾರ್ಗದರ್ಶನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಲಾಗಿತ್ತು. ಹಲವು ನ್ಯೂನತೆಗಳು ಕಂಡು ಬಂದಿದ್ದು, ಇನ್ನೊಂದು ವಾರದೊಳಗೆ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಭದ್ರಾವತಿ ಸಮೀಪ ರೈಲಿಗೆ ಸಿಲುಕಿ ವ್ಯಕ್ತಿ ಸಾವು, ಪತ್ತೆಯಾಗದ ಗುರುತು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200