ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 JUNE 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಮಧ್ಯೆ ಕರ್ನಾಟಕ ಭಾಗದ ಪ್ರಮುಖ ಜಲಾಶಯಗಳಲ್ಲಿ (DAM) ಒಂದಾಗಿರುವ ಗಾಜನೂರಿನ ತುಂಗಾ ಡ್ಯಾಂ ಭರ್ತಿಯಾಗಿದೆ. ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ಒಳ ಹರಿವು ಪ್ರಮಾಣ ಏರಿಕೆಯಾದರೆ ಯಾವುದೇ ಸಂದರ್ಭ ಕ್ರಸ್ಟ್ ಗೇಟ್ಗಳ ಮೂಲಕ ನೀರನ್ನು ಹೊರಗೆ ಬಿಡಲಾಗುತ್ತದೆ. ಭರ್ತಿಯಾಗಿರುವ ತುಂಗಾ ಜಲಾಶಯದ ಫೋಟೊಗಳು ಇಲ್ಲಿವೆ.
ತುಂಗಾ ಜಲಾಶಯದಲ್ಲಿ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಮೀಟರ್. ಈಗಾಗಲೇ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿದೆ. ಹಿನ್ನೀರು ಭಾಗದಲ್ಲಿ ಸ್ವಲ್ಪ ಮಳೆಯಾದರೂ ಜಲಾಶಯ ಭರ್ತಿಯಾಗಲಿದೆ.
ಡ್ಯಾಂಗೆ 22 ಗೇಟುಗಳಿವೆ
ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಗೆ ತುಂಗಾ ಜಲಾಶಯವೆ ಆಧಾರ. ಅಚ್ಚುಕಟ್ಟು ಭಾಗದ ಜಮೀನಿಗೆ ಕೃಷಿ ಚಟುವಟಿಕೆಗು ಇದೆ ಜಲಾಶಯದ ಮೂಲಕ ನೀರು ಹರಿಸಲಾಗುತ್ತದೆ. ಎಡ ಮತ್ತು ಬಲ ದಂಡೆ ನಾಲೆಗಳಿವೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಥಂಡಿ ವಾತಾವರಣ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
ಗಾಜನೂರಿನ ತುಂಗಾ ಜಲಾಶಯದ 3.24 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಡ್ಯಾಂಗೆ 22 ಗೇಟುಗಳಿವೆ. ಈಗಾಗಲೇ ಜಲಾಶಯದಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿರುವುರಿಂದ ಕ್ರಸ್ಟ್ ಗೇಟ್ಗಳ ಮೇಲ್ಮಟ್ಟಕ್ಕೆ ನೀರು ತಲುಪಿದೆ. ಇವುಗಳ ಕಂಪ್ಲೀಟ್ ಫೋಟೊಗಳು ಇಲ್ಲಿವೆ.