ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 FEBRUARY 2023
SHIMOGA : ಅಬ್ಬಲಗೆರೆ ಸಮೀಪ ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಎಸ್ಕಾರ್ಟ್ ವಾಹನದ (Police Escort) ಪೊಲೀಸ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯಿಂದಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಗದೀಶ್ ನಾಯ್ಕ್ ಮತ್ತು ಮಂಜುನಾಥ್ ಗಾಯಾಳುಗಳು. ಸವಳಂಗ ರಸ್ತೆಯಲ್ಲಿ ಅಬ್ಬಲಗೆರೆ ಸಮೀಪ ಬೈಕುಗಳು ಡಿಕ್ಕಿಯಾಗಿ ಇಬ್ಬರು ಗಾಯಗೊಂಡು, ರಸ್ತೆ ಮೇಲೆ ಬಿದ್ದಿದ್ದರು. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜಗದೀಶ್ ನಾಯ್ಕ್ ಅವರಿಗೆ ಗಂಭೀರ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಎಸ್ಕಾರ್ಟ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ
ಇನ್ನು, ಇದೆ ದಾರಿಯಲ್ಲಿ ಬಂದ ಎಸ್ಕಾರ್ಟ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ವಾಹನಕ್ಕೆ ಶಿವಮೊಗ್ಗ ಪೊಲೀಸರು ಎಸ್ಕಾರ್ಟ್ (Police Escort) ನೀಡಿದ್ದರು. ಕರ್ತವ್ಯ ಮುಗಿಸಿ ಎಸ್ಕಾರ್ಟ್ ವಾಹನದ ಚಾಲಕ, ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಸತೀಶ್ ಮತ್ತು ಎ.ಆರ್.ಎಸ್.ಐ ರವಿಕುಮಾರ್ ಶಿವಮೊಗ್ಗಕ್ಕೆ ಮರಳುತ್ತಿದ್ದರು. ಈ ವೇಳೆ ಅಪಘಾತವಾಗಿರುವುದನ್ನು ಗಮನಿಸಿ, ಗಾಯಾಳುಗಳನ್ನು ಜೀಪಿನಲ್ಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ.
ಇದನ್ನೂ ಓದಿ – ಪ್ರಧಾನಿ ಕಾರ್ಯಕ್ರಮದ ವೇದಿಕೆ ಮುಂದೆ ಬಾಯಿ ಬಡಿದುಕೊಂಡು ಗಮನ ಸೆಳೆಯಲು ಯತ್ನಿಸಿದ ಕಾರ್ಮಿಕರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422