ಕೂಡ್ಲಿಯಲ್ಲಿ ತುಂಗಭದ್ರಾ ನದಿಗೆ ಹಾರಲು ಯತ್ನ, ಮಹಿಳೆಯನ್ನು ರಕ್ಷಿಸಿದ 112 ಪೊಲೀಸ್‌, ಆಗಿದ್ದೇನು?

ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು

ಹೊಳೆಹೊನ್ನೂರಿನ ಕೂಡ್ಲಿ ಬಳಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಇಆರ್‌ಎಸ್‌ಎಸ್ 112 ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಚಿತ್ರದುರ್ಗದಿಂದ ವ್ಯಕ್ತಿಯೊಬ್ಬ 112 ಗೆ ಕರೆ ಮಾಡಿ ತನ್ನ ಪತ್ನಿ ಕೂಡ್ಲಿಯಲ್ಲಿ ತುಂಗಭದ್ರಾ ನದಿಗೆ ಹಾರುವುದಾಗಿ ಬೆದರಿಸಿದ್ದಾಗಿ ತಿಳಿಸಿದ್ದರು.

Police-Rescue-Woman-at-Kudli-in-Shivamogga-Taluk.webp

ತಕ್ಷಣ ಕಾರ್ಯಪ್ರವೃತ್ತರಾದ ಇಆರ್‌ಎಸ್‌ಎಸ್ ವಾಹನದಲ್ಲಿದ್ದ ಸಿಪಿಸಿ ಅಶೋಕ್‌ಕುಮಾ‌ರ್ ಮತ್ತು ಚಾಲಕ ಎಪಿಸಿ ಅಮರೇಶ್‌ ನ್ಯಾಯ್ಕ್‌ ಸ್ಥಳಕ್ಕೆ ತೆರಳಿ, ಮಹಿಳೆಯನ್ನು ಗುರುತಿಸಿ ರಕ್ಷಣೆ ಮಾಡಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ.