ಆಯನೂರಿನ ನಾಲ್ಕು ಕಡೆ ಪೊಲೀಸ್‌ ದಾಳಿ, ಪ್ರತ್ಯೇಕ ಕೇಸ್‌ ದಾಖಲು

ಶಿವಮೊಗ್ಗ: ಪರವಾನಗಿ ಇಲ್ಲದೆ (Without permission) ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟವರಿಗೆ ಕುಂಸಿ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಾಲ್ಕು ಕಡೆ ಪ್ರತ್ಯೇಕವಾಗಿ ದಾಳಿ (Raid) ನಡೆಸಿ ಪ್ರಕರಣಗಳನ್ನು ದಾಖಲು (Cases registered) ಮಾಡಿದ್ದಾರೆ.

ಎಲ್ಲೆಲ್ಲಿ ದಾಳಿಯಾಯ್ತು?

ದಾಳಿ 1: ಕುಂಸಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (Sub-Inspector) ಮತ್ತು ಸಿಬ್ಬಂದಿ ಆಯನೂರು ಗ್ರಾಮದ ಎಗ್ ರೈಸ್ ಅಂಗಡಿಯೊಂದರ (Egg rice shop) ಮುಂದೆ ದಾಳಿ ನಡೆಸಿದ್ದಾರೆ. ಪರವಾನಗಿ ಇಲ್ಲದೆ ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

200123 Police Jeep With Light jpg

ದಾಳಿ 2: ಆಯನೂರು ಮಾರುಕಟ್ಟೆ (Market) ಬಳಿ ಇರುವ ಅಂಗಡಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಗಡಿಯ ಮುಂದೆ ಅಕ್ರಮವಾಗಿ (Illegally) ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗಿತ್ತು. ಮದ್ಯದ ಪೌಚ್‌ಗಳನ್ನು ವಶಕ್ಕೆ (Seized) ಪಡೆಯಲಾಗಿದೆ.

ದಾಳಿ 3: ಆಯನೂರು ಗ್ರಾಮದ ಹಳೇ ನಾಡಕಚೇರಿ (Old Nadakacheri) ಬಳಿ ಇರುವ ಅಂಗಡಿಯೊಂದರ ಮುಂದೆ ಪೊಲೀಸರು ದಾಳಿ ನಡೆಸಿದರು. ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ ನೀಡಿದ ಅಂಗಡಿ ಮಾಲೀಕನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ (Karnataka Excise Act) ಕೇಸ್ ದಾಖಲಿಸಲಾಗಿದೆ.

Kalleshwara-Enterprises.webp

ದಾಳಿ 4: ಆಯನೂರು ಗ್ರಾಮದ ಕೆಳಭಾಗದ ಮಾರುಕಟ್ಟೆ ರಸ್ತೆಯಲ್ಲಿರುವ ಹೋಟೆಲ್ (Hotel) ಒಂದರ ಮುಂಭಾಗದಲ್ಲಿಯು ದಾಳಿ ನಡೆಸಲಾಗಿದೆ. ಹೋಟೆಲ್ ಎದುರು ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp