ಎಕ್ಸ್‌ಪ್ರೆಸ್‌ ಬಸ್‌ ತಡೆದು ಡ್ರೈವರ್‌, ಕಂಡಕ್ಟರ್‌ ಮೇಲೆ ದಾಳಿ, ಕಾರಣವೇನು?

ಶಿವಮೊಗ್ಗ: ಎಕ್ಸ್‌ಪ್ರೆಸ್ ಬಸ್‌ಗೆ ಸ್ಟಾಪ್‌ ಇಲ್ಲದ ಕಾರಣಕ್ಕೆ ನಿಲುಗಡೆ ಮಾಡದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ತನ್ನ ಸಹಚರರೊಂದಿಗೆ ಸೇರಿ ಖಾಸಗಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡಿದ್ದಾನೆ. ಶಿವಮೊಗ್ಗ ತಾಲೂಕಿನ ಮೇಲಿನ ಕುಂಚೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ವಿಜಯ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ಲೋಕೇಶ್ ಡಿ.ಕೆ. (42) ಹಲ್ಲೆಗೊಳಗಾದವರು. ಜೂನ್ 30ರ ಬೆಳಿಗ್ಗೆ ಚಾಲಕ ಮಂಜುನಾಥ್ ಅವರೊಂದಿಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುವ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಕ್ಸ್‌ಪ್ರೆಸ್‌ ಬಸ್‌ ಆಗಿರುವುದರಿಂದ ಈ ಮಾರ್ಗದಲ್ಲಿ ಬಸ್‌ಗೆ ಸವಳಂಗದಲ್ಲಿ ಮಾತ್ರ ನಿಲುಗಡೆ ಇರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

301123-Shimoga-Rural-Police-Station.webp

ಮೇಲಿನ ಕುಂಚೇನಹಳ್ಳಿ ನಿವಾಸಿ ಲೋಕೇಶ್ ನಾಯ್ಕ್ ಮತ್ತು ಆತನ ಹೆಂಡತಿ ಕಳೆದ 15 ದಿನಗಳಿಂದ ಶಿಕಾರಿಪುರಕ್ಕೆ ಹೋಗಲು ಈ ಎಕ್ಸ್‌ಪ್ರೆಸ್ ಬಸ್ ಅನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ಇದು ಎಕ್ಸ್‌ಪ್ರೆಸ್ ಬಸ್ ಆಗಿರುವುದರಿಂದ ಇಲ್ಲಿ ಸ್ಟಾಪ್ ಇರುವುದಿಲ್ಲ. ಇದರ ಬದಲು 10 ನಿಮಿಷ ಮುಂಚಿತವಾಗಿ ಬರುವ ಮತ್ತೊಂದು ಬಸ್‌ನಲ್ಲಿ ತೆರಳುವಂತೆ ಕಂಡಕ್ಟರ್ ಹಾಗೂ ಬಸ್ ಮಾಲೀಕ ವೀರೇಶ್ ಪೂಜಾರ್ ತಿಳಿಸಿದ್ದರು.

ಜೂನ್ 30ರಂದು ಬೆಳಿಗ್ಗೆ ಬಸ್ಸು ಕುಂಚೇನಹಳ್ಳಿಗೆ ತಲುಪಿದಾಗ ಲೋಕೇಶ್ ನಾಯ್ಕ್ ಹಾಗೂ ಇತರೆ 5 ರಿಂದ 6 ಜನ ಸೇರಿ ಬಸ್ಸನ್ನು ಅಡ್ಡಗಟ್ಟಿದ್ದಾರೆ. ಬಸ್ ಒಳಗೆ ನುಗ್ಗಿದ ಲೋಕೇಶ್ ನಾಯ್ಕ್, ಕಂಡಕ್ಟರ್ ಲೋಕೇಶ್ ಡಿ.ಕೆ. ಅವರ ಮೂಗಿಗೆ ಗುದ್ದಿದ್ದು, ರಕ್ತ ಬಂದಿದೆ. ಅಲ್ಲದೆ ತಲೆಯ ಹಿಂಭಾಗಕ್ಕೆ ಮುಷ್ಟಿಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಚಾಲಕ ಮಂಜುನಾಥ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.   ಬಸ್‌ನಲ್ಲಿದ್ದ ಪ್ರಯಾಣಿಕರು ಜಗಳ ಬಿಡಿಸಿದ್ದಾರೆ. ಆಗ ಆರೋಪಿಗಳು ಚಾಲಕ ಮತ್ತು ನಿರ್ವಾಹಕನಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!