NEWS HIGHLIGHTS
ಶಿವಮೊಗ್ಗ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವ್ಯಕ್ತಿಯ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಹಾರನಹಳ್ಳಿ ನಿವಾಸಿ ಮೂರ್ತಿ (45) ಗಾಯಗೊಂಡವರು. ಮೂರ್ತಿ ಅವರು ಹಾರನಹಳ್ಳಿಯ ಕೆ.ಇ.ಬಿ ಕಚೇರಿ ಮುಂಭಾಗ ರಸ್ತೆ ದಾಟುತ್ತಿದ್ದಾಗ, ಶಿವಮೊಗ್ಗ ಕಡೆಯಿಂದ ಸಾಗರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂರ್ತಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಎಡಭುಜ ಹಾಗೂ ಪಕ್ಕೆಲುಬಿನ ಮೂಳೆ ಮುರಿದಿದೆ ಎಂದು ಆರೋಪಿಸಲಾಗಿದೆ.

ಮೂರ್ತಿ ಅವರನ್ನು ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:➤ ಹೊಳಲೂರಿನಲ್ಲಿ ಬೈಕ್ ಕಳ್ಳತನ, ಹೇಗಾಯ್ತು ಕೃತ್ಯ?